ಬೆಂಗಳೂರು: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಮಂಗಳವಾರ ರಾಜಭವನ ಚಲೋ ಹಮ್ಮಿಕೊಂಡಿರುವ ಕಾರಣ ಸಂಚಾರ ದಟ್ಟಣೆ ನಿವಾರಣೆಗೆ ಪೊಲೀಸರು ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ.

ಮೈಸೂರು, ತುಮಕೂರು, ಕನಕಪುರ, ಬಳ್ಳಾರಿ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳ ಕಡೆಯಿಂದ ಸಾವಿರಾರು ಪ್ರತಿಭಟನಕಾರರು ಸ್ವಾತಂತ್ರ್ಯ ಉದ್ಯಾನಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಅಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಬೇಕಿದೆ.

ಪ್ರತಿಭಟನೆಗೆ ಬರುವ ಬಸ್‌ಗಳು ಮೇಖ್ರಿವೃತ್ತದ ಬಳಿಯ ಅರಮನೆ ಮೈದಾನದ ಗೇಟ್ ನಂ 1, 2, ಮತ್ತು 3ರಲ್ಲಿ ನಿಲುಗಡೆ ಮಾಡಬೇಕು. ಕಾರು, ದ್ವಿಚಕ್ರ ವಾಹನಗಳನ್ನು ಸ್ವಾತಂತ್ರ್ಯ ಉದ್ಯಾನದಲ್ಲಿರುವ ಬಹುಮಹಡಿ ಕಾರು ಪಾರ್ಕಿಂಗ್ ಜಾಗದಲ್ಲಿ ಶುಲ್ಕ ಪಾವತಿಸಿ ನಿಲುಗಡೆ ಮಾಡಬೇಕು.

ಮಂಗಳವಾರ ಕೆಪಿಎಸ್‌ಸಿ ಪರೀಕ್ಷೆ ಕೂಡ ಇರುವುದರಿಂದ ಪರೀಕ್ಷಾರ್ಥಿಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.