ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಸಂಸ್ಥೆ (ಇಂದಿರಾನಗರ) ವತಿಯಿಂದ ನೀಡಲಾಗುವ ಈ ಸಾಲಿನ ‘ರೋಟರಿ ರಾಜ್ಯೋತ್ಸವ ಪ್ರಶಸ್ತಿ’ ಘೋಷಣೆಯಾಗಿದ್ದು, ಇದೇ 4ರಂದು ಸಂಜೆ 4.30ಕ್ಕೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ‘ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ (ಶಾಂತಿ ರಕ್ಷಣೆ ಹಾಗೂ ಸಂಘರ್ಷ ಪರಿಹಾರ), ಡಾ.ಪದ್ಮಿನಿ ಪ್ರಸಾದ್ (ರೋಗ ನಿಯಂತ್ರಣ ಮತ್ತು ಚಿಕಿತ್ಸೆ), ವಿಶ್ವನಾಥ್ ಶ್ರೀಕಂಠಯ್ಯ (ನೀರು ಮತ್ತು ನೈರ್ಮಲ್ಯ), ಆಶಾ ವಿಜಯ್ (ತಾಯಿ ಮತ್ತು ಶಿಶು ಆರೈಕೆ), ಜಿ.ಎನ್.ನರಸಿಂಹಮೂರ್ತಿ (ಮೂಲಶಿಕ್ಷಣ ಮತ್ತು ಸಾಕ್ಷರತೆ), ಎಲ್.ಎಚ್.ಮಂಜುನಾಥ್ (ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ) ಈ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶಕ ಎಂ.ಎನ್.ಸತೀಶ್, ‘ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. 3190 ಜಿಲ್ಲಾ ಗವರ್ನರ್ ಸಮೀರ್ ಹರಿಯಾನಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಎಂ.ಚಿದಾನಂದ ಮೂರ್ತಿ, ಮೇಯರ್ ಎಂ.ಗೌತಮ್ ಕುಮಾರ್ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆ.ಪಿ.ನಾಗೇಶ್, ‘ಕರ್ನಾಟಕ ಸಂಭ್ರಮ–ರೋಟರಿ ಸಂಗಮ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಪಟ್ಟದ ಕುಣಿತ, ಕಂಸಾಳೆ, ಪೂಜಾ ಕುಣಿತ, ಯಕ್ಷಗಾನ ಹಾಗೂ ‘ಕರ್ನಾಟಕ ವೈಭವ’ ನೃತ್ಯ ನಾಟಕ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.