ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಸೋಮವಾರ ಐದು ರಾಯಲ್ ‘ಎನ್‌ಫೀಲ್ಡ್–350’ ಬೈಕ್‌ಗಳು ಸೇರ್ಪಡೆಯಾದವು.

‘ಪ್ರತಿ ಬೈಕ್‌ಗೆ ಸುಮಾರು ₹2 ಲಕ್ಷ ಬೆಲೆಯಿದೆ. ಒಟ್ಟು ₹10 ಲಕ್ಷ ವೆಚ್ಚ ಮಾಡಲಾಗಿದೆ. ಬೈಕ್ ಮೇಲೆ ಲಾಂಛನ ಹಾಕಲಾಗಿದೆ. ಬೈಕ್ ಮುಂಭಾಗವನ್ನು ಮಾರ್ಪಾಡು ಮಾಡಲಾಗಿದೆ‘ ಎಂದು ಮೂಲಗಳು ಹೇಳಿವೆ.

ನಗರದ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಬೈಕ್ ಚಲಾಯಿಸಿ ಪರಿಶೀಲಿಸಿದರು.

ಗಣ್ಯರ ಭದ್ರತೆ ಹಾಗೂ ಪರೇಡ್‌ಗೆ ಈ ಬೈಕ್‌ಗಳನ್ನು ಬಳಸಿಕೊಳ್ಳಲಾಗುವುದು. ಈ ಬೈಕ್ ಸೇರ್ಪಡೆಯಿಂದ ಅನಾಹುತ ನಡೆದ ಸ್ಥಳಕ್ಕೆ ಬೇಗನೆ ತೆರಳಲು ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬೈಕ್‌ಗಳನ್ನು ಇಲಾಖೆಗೆ ಹಸ್ತಾಂತರಿಸಲಿದ್ದಾರೆ ಎಂದು ದಯಾನಂದ ಅವರು ತಿಳಿಸಿದ್ದಾರೆ. ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.