ಬೆಂಗಳೂರು: ಹುಳಿಮಾವು ಸಮೀಪದ ತೇಜಸ್ವಿನಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸೆಕ್ಯುರಿಟಿ ಗಾರ್ಡ್ಗಳಿಬ್ಬರ ಕೊಲೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಅಕ್ರಮವಾಗಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದ ಆರೋಪದಡಿ ‘ವಿನಾಯಕ ಸೆಕ್ಯುರಿಟಿ ಫೋರ್ಸ್’ ಏಜೆನ್ಸಿಯ ಮಾಲೀಕ ಮಂಜು ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.

‘ವಾಲ್ಮಾರ್ಕ್ ಸಿಟಿ ವಿಲ್ಲಾ’ ಹೆಸರಿನ ನಿರ್ಮಾಣ ಹಂತದ ಬಡಾವಣೆಯಲ್ಲಿ ಸೈಯದ್ವುಲ್ಲಾ ಹಾಗೂ ಬಿಕ್ರಂ ಬೋರಾ ಎಂಬುವರನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿ ಅಸ್ಸಾಂನ ಅಜಿತ್ ಬ್ರಹ್ಮನನ್ನು (23) ಈಗಾಗಲೇ ಬಂಧಿಸಲಾಗಿದೆ. ಈ ಮೂವರಿಗೂ ಮಂಜು, ತನ್ನ ಏಜೆನ್ಸಿಯಲ್ಲೇ ಸೆಕ್ಯುರಿಟಿ ಗಾರ್ಡ್ಗಳ ಕೆಲಸ ಕೊಟ್ಟಿದ್ದ’ ಎಂದು ಹುಳಿಮಾವು ಪೊಲೀಸರು ಹೇಳಿದರು.

‘ಸೆಕ್ಯುರಿಟಿ ಏಜೆನ್ಸಿ ನಡೆಸುವವರು ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಿಂದ (ಐಎಸ್ಡಿ) ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಮಂಜು ಅಂಥ ಯಾವುದೇ ಅನುಮತಿ ಪಡೆದಿಲ್ಲ. ಖಾಸಗಿ ಭದ್ರತಾ ಸಂಸ್ಥೆಗಳ ನಿರ್ಬಂಧಗಳ ಕಾಯ್ದೆ ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.