ಬೆಂಗಳೂರು: ‘ರಾಜಕೀಯ ಒತ್ತಡದಿಂದಾಗಿ ಬುಡಕಟ್ಟು ಸಮುದಾಯದ ಮನೆಗಳು, ಪ್ರದೇಶಗಳಿಗೂ ಶ್ರೀರಾಮ ಬಂದಿದ್ದಾನೆ. ಇದರಿಂದಾಗಿ ಬುಡಕಟ್ಟು ಸಮುದಾಯದವರು ತಮ್ಮ ಮೂಲ ಸಂಸ್ಕೃತಿ, ಮನೆ ದೇವರನ್ನು ಮರೆತು ಬಿಡುತ್ತಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿನ್ನರಿ ಜೋಗಿ ಕಲಾವಿದ ಕೆ. ಗುಡ್ಡಪ್ಪ ಜೋಗಿ ಅವರಿಗೆ ‘ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ.

ಈ ವೇಳೆ ಮಾತನಾಡಿದ ಬಿಳಿಮಲೆ, ‘ಜಾನಪದದ ಮೂಲ ಆಶಯವನ್ನು ಆಮೂಲಾಗ್ರವಾಗಿ ಬದಲಾಯಿಸುವಷ್ಟು ಹಿಂದುತ್ವ ಜನಪ್ರಿಯವಾಗಿದೆ. ಛತ್ತೀಸಗಢ, ಜಾರ್ಖಂಡ್ ಸೇರಿ ವಿವಿಧೆಡೆ ಬುಡಕಟ್ಟು ಸಮುದಾಯದವರು ಮೂಲ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಈ ಸಮುದಾಯದ ಮನೆಗಳಲ್ಲಿ ಶ್ರೀರಾಮನ ಆರಾಧನೆ ಹಿಂದೆ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಾರಣಗಳಿಂದ ಶ್ರೀರಾಮ ಬಂದು ನೆಲೆಸುತ್ತಿದ್ದಾನೆ’ ಎಂದರು.

‘ಜಾನಪದ ಕಲೆಗಳನ್ನು ಉಳಿಸಲು ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಕಾರ್ಯಕ್ರಮಗಳನ್ನು ರೂಪಿಸಿ, ಸರ್ಕಾರದ ನೆರವು ಪಡೆಯಬೇಕಿದೆ. ವಿವಿಧ ಪರಿಕರಗಳು ಹಾಳಾಗದಂತೆ ಕಾಪಾಡಿಕೊಳ್ಳಬೇಕಿದೆ. ಜಾನಪದಕ್ಕೆ ಸಂಬಂಧಿಸಿದಂತೆ ಡಿಜೀಟಲಿಕರಣ ಪ್ರಕ್ರಿಯೆ ನಡೆಯಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಹಂ.ಪ. ನಾಗರಾಜಯ್ಯ, ‘ಜಾನಪದದಲ್ಲಿ ಉತ್ತಮವಾದ ವಿಚಾರಗಳನ್ನು ಹೇಳಲಾಗಿದೆ. ಸ್ತ್ರೀಯರಿಗೆ ಮೊದಲ ಸ್ಥಾನ ನೀಡಲಾಗಿದೆ. ಜಾನಪದದ ಅಧ್ಯಯನಕ್ಕೆ ಸಮಯವನ್ನು ಮೀಸಲಿಡಬೇಕು. ಜಾನಪದವು ಬದುಕಿಗೆ ಕಾಂತಿಯನ್ನು ನೀಡಲಿದೆ’ ಎಂದು ಹೇಳಿದರು.

ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ‘ಜಾನಪದ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಾಗುತ್ತಿದೆ. ಪರಿಷತ್ತಿಗೆ ಯುನೆಸ್ಕೊ ಮಾನ್ಯತೆ ದೊರೆತಿದೆ. ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಒದಗಿಸಬೇಕು’ ಎಂದರು.

Quote - ಜೋಗಿ ಸಮುದಾಯದವರ ಸಂಖ್ಯೆ ರಾಜ್ಯದಲ್ಲಿ 3 ಲಕ್ಷದಷ್ಟಿದೆ. ಹಲವು ಉಪ ಪಂಗಡಗಳಿವೆ. ಈ ಸಮುದಾಯದವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಕೆ. ಗುಡ್ಡಪ್ಪ ಜೋಗಿ ಕಿನ್ನರಿ ಜೋಗಿ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.