ಬೆಂಗಳೂರು: ನಗರದ ಯಲಹಂಕ ವಲಯದಲ್ಲಿ ಕೆಲವೆಡೆ ಬೀದಿದೀಪಗಳು ಬೆಳಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್ ಗಂಗಾಂಬಿಕೆ, ಅವುಗಳ ನಿರ್ವಹಣೆಯ ಗುತ್ತಿಗೆದಾರರಿಗೆ ದಂಡ ವಿಧಿಸಿದರು.

ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ಮೇಯರ್ ಅವರು ಯಲಹಂಕ ವಲಯದ ನಿಯಂತ್ರಣ ಕೊಠಡಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಅನೇಕರು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.

ಈ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ಸಂಜಯನಗರ ಹಾಗೂ ಗಂಗಾನಗರ ಪ್ರದೇಶಗಳಲ್ಲಿ ಮೇಯರ್ ತಪಾಸಣೆ ನಡೆಸಿದಾಗ ಬಹುತೇಕ ದೀಪಗಳು ಉರಿಯುತ್ತಿರಲಿಲ್ಲ. ಇವುಗಳ ನಿರ್ವಹಣೆಯ ಗುತ್ತಿಗೆದಾರರಾದ ರಮಾಮಣಿ ಅವರಿಗೆ ₹ 25 ಸಾವಿರ ದಂಡವನ್ನು ವಿಧಿಸುವಂತೆ ಕಾರ್ಯಪಾಲಕ ಎಂಜಿನಿಯರ್ ಆನಂದ್ ಅವರಿಗೆ ಸೂಚಿಸಿದರು.

ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಿಂದ ಮುಂದಕ್ಕೆ ಸುಮಾರು 2 ಕಿ.ಮೀವರೆಗೆ ರಸ್ತೆ ದೀಪಗಳೂ ಉರಿಯುತ್ತಿರಲಿಲ್ಲ. ಇವುಗಳ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ಇಬ್ರಾಹಿಂ ಅವರಿಗೆ ₹ 25 ಸಾವಿರ ದಂಡ ವಿಧಿಸಿದರು.

ಬೀದಿದೀಪ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸದ ಎಂಜಿನಿಯರ್‌ಗಳಿಗೂ ನೋಟಿಸ್ ನೀಡಿ ಕ್ರಮ ತೆಗೆದು ಕೊಳ್ಳುವಂತೆ ಮೇಯರ್ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

ಈ ವಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇಯರ್ ಅವರು ಪಾಲಿಕೆಯ ವಿಶೇಷ ಆಯುಕ್ತರು, ಯೋಜನೆ, ರಸ್ತೆ ಮೂಲಸೌಕರ್ಯ ಮತ್ತು ಕೆರೆ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.