ಲಿಂಗರಾಜಪುರದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್– 2 ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
‘ಸುತ್ತಲಿನ ನಗರಗಳಿಗೆ ವಿಸ್ತರಣೆಯ ಗುರಿ’
ಉಪನಗರ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರ ಮೈಸೂರು ಮಾಗಡಿ ತುಮಕೂರು ಗೌರಿಬಿದನೂರು ಕೋಲಾರ ಮತ್ತು ಹೊಸೂರುಗಳಿಗೆ ವಿಸ್ತರಿಸುವ ಉದ್ದೇಶವಿದೆ. ಇದರ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಯೋಜನೆ ಈಗ 148 ಕಿ.ಮೀ. ಆಗಿದೆ. ವಿಸ್ತರಣೆಗೊಂಡರೆ 452 ಕಿ.ಮೀಗೆ ಹಿಗ್ಗಲಿದೆ ಎಂದು ಸಚಿವರು ತಿಳಿಸಿದರು.
‘ಉಪಗುತ್ತಿಗೆಗೆ ಅವಕಾಶವಿಲ್ಲ’
‘ಕಾರಿಡಾರ್–2 ಕಾಮಗಾರಿಯನ್ನು ಎಲ್ ಆ್ಯಂಡ್ ಟಿ ಸಂಸ್ಥೆ ಗುತ್ತಿಗೆ ಪಡೆದಿದೆ. ಈ ಸಂಸ್ಥೆಯವರು ಉಪಗುತ್ತಿಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಪ ಗುತ್ತಿಗೆ ನೀಡದೇ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಬೇಕು. ಸಣ್ಣ ಅಡೆತಡೆಗಳನ್ನೇ ನೆಪವಾಗಿಸಿ ತಡಮಾಡಬಾರದು’ ಎಂದು ಶಾಸಕ ಮುನಿರತ್ನ ಸಲಹೆ ನೀಡಿದರು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ‘ಕಾಮಗಾರಿಗಳನ್ನು ಎಲ್ ಆ್ಯಂಡ್ ಟಿ ಕಂಪನಿ ಉಪ ಗುತ್ತಿಗೆ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಉಪಗುತ್ತಿಗೆ ನೀಡಲು ಅವಕಾಶವಿಲ್ಲ‘ ಎಂದರು.