ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಕೈ ಗಡಿಯಾರಗಳನ್ನು ಬಿಲ್ ರಶೀದಿ ಇಲ್ಲದೇ ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಸೈಯದ್ ಮೊಹಮ್ಮದ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಸೈಯದ್, ಶಿವಾಜಿ ನಗರದ ಎಚ್.ಕೆ.ಪಿ ರಸ್ತೆಯಲ್ಲಿ ಕೈ ಗಡಿಯಾರ ಮಾರುತ್ತಿದ್ದ. ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 83 ಕೈ ಗಡಿಯಾರಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳ ಮೌಲ್ಯ ₹ 4.32 ಕೋಟಿ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ರೋಲೆಕ್ಸ್, ಹ್ಯಾಬ್ಲೋಟ್, ರ್ಯಾಡೊ, ಟಿಸ್ಸಾಟ್, ಫಾಸಿಲ್, ಪೊಲೀಸ್ ಸೇರಿ ಹಲವು ಕಂಪನಿಗಳ ಹೆಸರಿದ್ದ ಕೈ ಗಡಿಯಾರಗಳು ಆರೋಪಿ ಬಳಿ ಇದ್ದವು. ಯಾವುದೇ ಬಿಲ್ ರಶೀದಿ ಇಲ್ಲದೇ ಕಡಿಮೆ ಬೆಲೆಗೆ ಗಡಿಯಾರಗಳನ್ನು ಮಾರುತ್ತಿದ್ದ.’

‘ಗಡಿಯಾರಗಳನ್ನು ಜಪ್ತಿ ಮಾಡಿ ಪರಿಶೀಲಿಸಲಾಗಿದೆ. ಬಹುತೇಕ ಗಡಿ ಯಾರಗಳು ನಕಲಿ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಹೆಚ್ಚಿನ ಪರೀಕ್ಷೆ ನಡೆಸಬೇಕಿದೆ. ಆರೋಪಿ ಯಾರಿಂದ ಗಡಿಯಾರ ತರುತ್ತಿದ್ದನೆಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.