ಬೆಂಗಳೂರು: ಎರಡು ತಿಂಗಳು ಕಳೆದರೂ ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸಲು ಆಗದ್ದಕ್ಕೆ ಭಾರತೀಯ ಮೂಲದ ಅಮೆರಿಕ ಟೆಕಿ ಒಬ್ಬರು ಟ್ವಿಟರ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಈ ಕುರಿತು ಜುಲೈ 27 ರಂದು ಟ್ವೀಟ್ ಮಾಡಿರುವ ಟೆಕ್ಕಿ ಬ್ರಿಜ್ ಸಿಂಗ್ ಎನ್ನುವರು, ‘ಎರಡು ತಿಂಗಳು ಕಳೆದರೂ ಬೆಂಗಳೂರಲ್ಲಿ ನನ್ನ ಹೊಸ ಕಂಪನಿ ನೋಂದಣಿ ಮಾಡೋಕೆ ಆಗಲಿಲ್ಲ. ಭಾರವಾದ ಹೃದಯದಿಂದ ಅಮೆರಿಕಕ್ಕೆ ವಾಪಸ್ ಹೋಗುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಬೆಂಗಳೂರು, ಭಾರತವನ್ನು ಪ್ರೀತಿಸುತ್ತೇನೆ. ಆದರೆ, ಮನೆಗೆ ಬಂದ ನಂತರ ಸಾಕಷ್ಟು ಅನುಭವ ಆಗಿದೆ. ಭಾರತದಲ್ಲಿ ಕಂಪನಿ ನೋಂದಾಯಿಸಲು (ಬೆಂಗಳೂರು) ಎರಡು ತಿಂಗಳು ಗತಿಸಿದರೂ ಆಗಿಲ್ಲ’ ಎಂದು ಹೇಳಿದ್ದಾರೆ.

‘ಇದರಿಂದ ಕಂಪನಿ ಹೂಡಿಕೆದಾರರು, ಸಹ ಸಂಸ್ಥಾಪಕರು ಹಾಗೂ ಗ್ರಾಹಕರ ಪ್ರತಿಕ್ರಿಯೆ ವಿಭಿನ್ನ ಮಟ್ಟದಲ್ಲಿ ಕಂಡು ಬಂದಿದೆ’ ಎಂದು ಹೇಳಿಕೊಂಡಿದ್ದಾರೆ. ‘ನಾನು ಅಮೆರಿಕಕ್ಕೆ ಹಿಂತಿರುಗುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಟ್ವೀಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿವರೆಗೆ ₹ 6.6 ಲಕ್ಷ ರೀಚ್ ಕಂಡಿದೆ. ಕೆಲವರು ನಿಮ್ಮ ಅನುಭವ ನಿಜ ಎಂದು ಹೇಳಿದರೆ, ಇನ್ನೂ ಕೆಲವರು ಬ್ರಿಜ್ ಸಿಂಗ್ ಟ್ವೀಟ್ ಅನ್ನು ಅಲ್ಲಗಳೆದಿದ್ದಾರೆ. ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸುವುದು ಸುಲಭ. ಏಳು ದಿನಗಳಲ್ಲಿ ಮಾಡಬಹುದು ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬ್ರಿಜ್ ಸಿಂಗ್ ಅವರು ತಂತ್ರಜ್ಞಾನ ಸಂಬಂಧಿ ಕಿರು ಉದ್ಯಮಗಳನ್ನು ಅಮೆರಿಕ ಹಾಗೂ ಭಾರತದಲ್ಲಿ ಮುನ್ನಡೆಸುತ್ತಿದ್ದಾರೆ. ಟ್ವಿಟರ್‌ನಲ್ಲಿ ಅವರು 8,403 ಫಾಲೋವರ್‌ಗಳನ್ನು ಹೊಂದಿದ್ದು, ಬ್ಲು ಟಿಕ್ ವೆರಿಫೈಡ್ ಖಾತೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.