ಬೆಂಗಳೂರು:ಬಸ್ ಪ್ರಯಾಣಿಕರ ವೇದಿಕೆ, ಸಿಟಿಜನ್ ಫಾರ್ ಬೆಂಗಳೂರು, ಬೆಳ್ಳಂದೂರು ಜೊತೆಗೆ,ವೈಟ್ಫೀಲ್ಡ್ ರೈಸಿಂಗ್ ಸಂಘಟನೆಗಳು ಇದೇ 11ರಂದು (ಬುಧವಾರ) ‘ನಿಮ್ಮಬಸ್ ಎಕ್ಸ್ಪ್ರೆಸ್’ ಯಾತ್ರೆ ಆಯೋಜಿಸಿವೆ.

‘ಬೆಳಿಗ್ಗೆ 9 ಗಂಟೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು 10 ಗಂಟೆಗೆ ಮಾರತಹಳ್ಳಿ ಸ್ಕೈವಾಕ್ ಬಳಿಯಿಂದ ಯಾತ್ರೆ ಆರಂಭವಾಗಲಿದೆ. ಬಿಎಂಟಿಸಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಕಮಿಷನರ್, ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್) ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ಬಸ್ ಪ್ರಯಾಣಿಕರ ವೇದಿಕೆ ತಿಳಿಸಿದೆ.

ಬಸ್ ಬಳಕೆ ಉತ್ತೇಜಿಸಲು ಹಮ್ಮಿಕೊಂಡ ಈ ಅಭಿಯಾನದಲ್ಲಿ ಚಿತ್ರನಟ ಚೇತನ್,ಅಶ್ವಿನ್ ಶರ್ಮ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಗಾಯಕಿ ಎಂ.ಡಿ.ಪಲ್ಲವಿ ಸಹಿತಪ್ರಸಿದ್ಧ ಸಂಗೀತಗಾರರೂ ಯಾತ್ರೆ ಯುದ್ಧಕ್ಕೂ ಹಾಡಲಿದ್ದಾರೆ.

ಸ್ವರಾತ್ಮ ಕನ್ನಡ ಜಾನಪದ ರಾಕ್ ಬ್ಯಾಂಡ್ ಈ ಕುರಿತು ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.