ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪುಟವನ್ನು ಹಿಂದಿ ಭಾಷೆಯಲ್ಲಿ ತೆರೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

'ಈ ಪುಟವನ್ನು ಅಳಿಸಿ ಇಲ್ಲದಿದ್ದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ' ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಖಾತೆಯನ್ನು ಗಮನಿಸಿದಾಗ, ಕಳೆದ ಅಕ್ಟೋಬರ್ ತಿಂಗಳಲ್ಲಿ 'ಎಕ್ಸ್'ನಲ್ಲಿ ಈಗಾಗಲೇ ಇರುವ ಆರ್ಸಿಬಿಯ ಅಧಿಕೃತ ಖಾತೆಯೊಂದಿಗೆ ಕನ್ನಡ ಹಾಗೂ ಹಿಂದಿಯಲ್ಲಿ ನೂತನ ಖಾತೆ ತೆರೆದಿರುವುದು ಗಮನಕ್ಕೆ ಬರುತ್ತದೆ.

ಆದರೆ ಹಿಂದಿಯಲ್ಲಿ ಖಾತೆ ತೆರೆದಿರುವುದು ಹಾಗೂ ಹಿಂದಿಯಲ್ಲಿ ಪೋಸ್ಟ್ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡಕ್ಕೆ ಸಂಬಂಧಪಟ್ಟಂತೆ ಹೊಸದಾಗಿ ಹಿಂದಿಯಲ್ಲಿ ಪೋಸ್ಟ್ ಮಾಡಲಾಗಿತ್ತು.

'ಹಿಂದಿಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ. ಹಿಂದಿ ಹೇರಿಕೆಯನ್ನು ನಿಲ್ಲಿಸಿ' ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

'ಹಿಂದಿ ಬಳಸೋಕೆ ಒಂದು ನೆಪ ಬೇಕಿತ್ತು. ಅದಕ್ಕೆ ಕನ್ನಡಕ್ಕಾಗಿ ಒಂದು ಖಾತೆ ತೆರೆದು ಜೊತೆಗೆ ಹಿಂದಿ ಅಂತ ಇನ್ನೊಂದು ತೆರೆಯಲಾಗಿದೆ. ವಾ! ಈ ಶೋಕಿ ಎಲ್ಲ ಬೇಡ. ಮೊದಲು ಈ ಖಾತೆ ಅಳಿಸಿ. ಅಧಿಕೃತ ಖಾತೆಯಲ್ಲೇ ಕನ್ನಡ ಬಳಸಿ' ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದಾರೆ.

'ಹಿಂದಿ ಭಾಷಿಕರಿಗೆ ಯಾಕೆ ಬಕೆಟ್ ಹಿಡಿತೀರಾ' ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲೂ ಸ್ಥಳೀಯ ಆಟಗಾರರಿಗೆ ಮನ್ನಣೆ ನೀಡಲಾಗಿಲ್ಲ ಎಂದು ಅಭಿಮಾನಿಗಳು ದೂರಿದ್ದಾರೆ.

ಆರ್ಸಿಬಿ ಕನ್ನಡ ಖಾತೆ ಇಲ್ಲಿದೆ...
.IPL Auction 2025 Day 2 LIVE Updates: ₹ 2 ಕೋಟಿ ನೀಡಿ ದೇವದತ್ತ ಪಡಿಕ್ಕಲ್ ಖರೀದಿಸಿದ ಆರ್ಸಿಬಿ.IPL Auction Day 1: ಆರ್ಸಿಬಿ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.