ನವದೆಹಲಿ: ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತೊರೆಯುತ್ತಿರುವುದಕ್ಕೆ ತಂಡದ ಸಹ ಮಾಲೀಕ ಪಾರ್ಥ ಜಿಂದಾಲ್ ದುಃಖ ವ್ಯಕ್ತಪಡಿಸಿದ್ದಾರೆ. ಮುಂಬರುವ ಆವೃತ್ತಿಗಳಲ್ಲಿ ಮತ್ತೆ ಒಂದಾಗೋಣ ಎಂದು ಅವರು ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಆಟಗಾರರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ದಾಖಲೆಯ ₹27 ಕೋಟಿ ನೀಡಿ ಲಖನೌ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ.

ಹರಾಜಿಗೂ ಮುನ್ನವೇ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ವೇಳೆ ತಂಡವು ನಾಯಕ ಪಂತ್ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬೆಲೆಗೆ ಲಖನೌ ತಂಡ ಖರೀದಿಸಿತ್ತು.

‘ರಿಷಭ್ ಪಂತ್ ನೀನು ಯಾವಾಗಲೂ ನನ್ನ ಕಿರಿಯ ಸಹೋದರನಾಗಿ ಇರುತ್ತೀಯ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ ಎಂದು ನನ್ನ ಹೃದಯಾಂತರಾಳದಿಂದ ಹೇಳುತ್ತಿದ್ದೇನೆ. ನೀನು ಸಂತೋಷವಾಗಿರಲು ಬೇಕಾದ ಎಲ್ಲವನ್ನೂ ನಾನು ಮಾಡಿದ್ದೇನೆ. ನಿನ್ನನ್ನು ನನ್ನ ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದೇನೆ’ಎಂದು ಜಿಂದಾಲ್ ಎಕ್ಸ್ನ ಭಾವನಾತ್ಮಕ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಮುಂದುವರಿದು, ‘ನೀನು ತಂಡ ತೊರೆಯುತ್ತಿರುವುದನ್ನು ನೋಡಲು ಬಹಳ ನೋವಾಗುತ್ತಿದೆ. ಈ ಬಗ್ಗೆ ನಾನು ಬಹಳ ಭಾವುಕನಾಗಿದ್ದೇನೆ. ನೀನು ಯಾವಾಗಲೂ ಡಿಸಿ ಜೊತೆ ಇರುತ್ತೀಯ. ಒಂದು ದಿನ ನಾವು ಮತ್ತೆ ಒಂದಾಗುತ್ತೇವೆ ಎಂಬ ಭರವಸೆ ಇದೆ’ ಎಂದು ಹೆಳಿದ್ದಾರೆ.

ಪ್ರತಿಯೊಂದಕ್ಕೂ ಧನ್ಯವಾದಗಳು ರಿಷಭ್. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ ಎಂದು ನೆನಪಿಡಿ. ಚೆನ್ನಾಗಿ ಆಡಿ. ಡೆಲ್ಲಿ ಕ್ಯಾಪಿಟಲ್ಸ್ನಿಂದ ನಮ್ಮೆಲ್ಲರ ಶುಭಾಶಯಗಳು ಎಂದು ಹೇಳಿದ್ದಾರೆ.

ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪಂತ್, ಅದೇ ರೀತಿಯ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ‘ಧನ್ಯವಾದ ಭಯ್ಯಾ ನನ್ನ ಭಾವನೆಯೂ ಅದೇ ಆಗಿದೆ’ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.