ನೆಲಮಂಗಲ: ಚಿಕ್ಕಬಾಣಾವರದ ನಿವಾಸಿ, ಯುಟ್ಯೂಬ್ ವಾಹಿನಿ ಟಿವಿ–11 ರ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್(38) ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಸೋಲದೇವನಹಳ್ಳಿ ಬಳಿಯ ಧರ್ಮನಾಯಕನ ತಾಂಡ್ಯದಲ್ಲಿ ನಟಿ ಲೀಲಾವತಿ ಅವರು ನಿರ್ಮಿಸಿರುವ ಪಶುಆಸ್ಪತ್ರೆ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಗುರುವಾರ ಮರಕ್ಕೆ ನೇಣು ಬಿಗಿದು ಕೊಂಡಿದ್ದರು. ಶುಕ್ರವಾರ ಸ್ಥಳೀಯರು ಮೃತದೇಹ ಗಮನಿಸಿ ಪೊಲೀಸರಿಗೆ ತಿಳಿಸಿದ್ದರು.

‘ಸ್ಥಳದಲ್ಲಿ ಮರಣಪತ್ರ ದೊರೆತಿದ್ದು ತಮ್ಮ ಸಾವಿಗೆ ತಾವೇ ಕಾರಣ, ಯಾವುದೇ ಹಣಕಾಸಿನ ಸಮಸ್ಯೆ, ಇನ್ನಿತರೆ ಯಾವುದೇ ಸಮಸ್ಯೆಗಳಿಲ್ಲ. ನನ್ನನ್ನು ಕ್ಷಮಿಸಿಯೆಂದು ಬರೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಿಗೆ ಪತ್ನಿ ಲಕ್ಷ್ಮಿ, ತಾಯಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.