ಬೆಂಗಳೂರು: ರಸ್ತೆಯ ಸಿಗ್ನಲ್ ಬಳಿ ಆಕ್ಸಲೇಟರ್ ಅನ್ನು ಜೋರಾಗಿ ಒತ್ತಿ ಕಿರಿಕಿರಿ ಉಂಟು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಐಪಿಎಸ್ ಅಧಿಕಾರಿ ಪುತ್ರನನ್ನು ಕಾರಿನಲ್ಲಿದ್ದ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಅವರ ಪುತ್ರ ಶ್ರೀಸಾಯಿ ಪ್ರೀತಂ ಬಾನೋತ್ ಅವರು ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

‘ಸೆ.16ರಂದು ಸಂಜೆ 5.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಶ್ರೀಸಾಯಿ ಪ್ರೀತಂ ಬಾನೋತ್ ಅವರು ಎಂ.ಜಿ.ರಸ್ತೆಯಿಂದ ಹೆಬ್ಬಾಳ ಮಾರ್ಗವಾಗಿ ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬ್ಯಾಟರಾಯನಪುರ ಸಿಗ್ನಲ್ ಬಳಿ ಕಾರಿನ ಚಾಲಕನೊಬ್ಬ ಆಕ್ಸಲೇಟರ್ ಜೋರಾಗಿ ಒತ್ತಿ ಕಿರಿಕಿರಿ ಉಂಟು ಮಾಡುತ್ತಿದ್ದ. ಅದನ್ನು ದೂರುದಾರ ಪ್ರಶ್ನಿಸಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಕಾರು ಚಾಲಕ, ಶ್ರೀಸಾಯಿ ಪ್ರೀತಂ ಬಾನೋತ್ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಸ್ವಲ್ಪ ದೂರದಲ್ಲೇ ಶ್ರೀಸಾಯಿ ಅವರ ಕಾರು ಅಡ್ಡಗಟ್ಟಿದ್ದ. ಬಳಿಕ, ಆರೋಪಿ ಕಾರು ಚಾಲಕ ಹಾಗೂ ಆತನ ಸ್ನೇಹಿತ ಅವಾಚ್ಯವಾಗಿ ನಿಂದಿಸಿ, ಶ್ರೀಸಾಯಿ ಪ್ರೀತಂ ಅವರ ಮುಖದ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ, ಕಾರಿನ ಗಾಜು ಒಡೆದು ಪರಾರಿ ಆಗಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.