ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ(ಎಸ್ಐಟಿ) ಪೊಲೀಸರು, ಹೈದರಾಬಾದ್ನಲ್ಲಿ ಆರೋಪಿಯಿಂದ ಬರೋಬ್ಬರಿ 10 ಕೆ.ಜಿ ಚಿನ್ನದಗಟ್ಟಿ ಹಾಗೂ ಚಿನ್ನದ ಬಿಸ್ಕತ್ಗಳನ್ನು ಜಪ್ತಿ ಮಾಡಿದ್ದಾರೆ.

ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದರೆ, ಇತ್ತ ಎಸ್ಐಟಿ ಅಧಿಕಾರಿಗಳೂ ತನಿಖೆ ತೀವ್ರಗೊಳಿಸಿದ್ದಾರೆ. ಅಕ್ರಮದ ಹಣದಿಂದ ಆರೋಪಿಗಳು ಖರೀದಿಸಿರುವ ಚಿನ್ನವನ್ನು ಗುರುವಾರ ರಾತ್ರಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

‘ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ(ಎಫ್ಎಫ್ಸಿಸಿಎಸ್ಎಲ್) ಅಧ್ಯಕ್ಷ, ಬಂಧಿತ ಆರೋಪಿ ಸತ್ಯನಾರಾಯಣ ವರ್ಮಾ ಅವರ ಫ್ಲ್ಯಾಟ್ ಮೇಲೆ ಗುರುವಾರ ದಾಳಿಮಾಡಿದ ಎಸ್ಐಟಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ. ಅಲ್ಲಿ ಬಚ್ಚಿಟ್ಟಿದ್ದ 10 ಕೆ.ಜಿ.ಗೂ ಹೆಚ್ಚು ಚಿನ್ನ ಜಪ್ತಿ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಆರೋಪಿ:

‘ವರ್ಮಾ ಅವರನ್ನು ಎಸ್ಐಟಿ ಅಧಿಕಾರಿಗಳು ಜೂನ್ 3ರಂದು ಹೈದರಾಬಾದ್ನಲ್ಲಿ ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಬ್ಯಾಂಕ್ ಖಾತೆಗೆ ಬಂದಿದ್ದ ಹಣದಿಂದ 35 ಕೆ.ಜಿಯಷ್ಟು ಚಿನ್ನ ಖರೀದಿಸಿ, ಅದರಲ್ಲಿ 20 ಕೆ.ಜಿಯನ್ನು ಅಕ್ರಮದಲ್ಲಿ ಭಾಗಿಯಾದವರಿಗೆ ಹಂಚಿಕೆ ಮಾಡಿ ಉಳಿದ 15 ಕೆ.ಜಿಯನ್ನು ಫ್ಲ್ಯಾಟ್ನಲ್ಲಿ ಇಟ್ಟಿರುವುದಾಗಿ ಹೇಳಿಕೆ ನೀಡಿದ್ದರು. ಹೇಳಿಕೆ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಸದ್ಯ 10 ಕೆ.ಜಿ ಚಿನ್ನ ಪತ್ತೆಯಾಗಿದೆ. 5 ಕೆ.ಜಿ ಚಿನ್ನಕ್ಕಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್ನಲ್ಲಿ ಫ್ಲ್ಯಾಟ್ ಖರೀದಿ:

ಸತ್ಯನಾರಾಯಣ ವರ್ಮಾ ಮತ್ತು ಅವರ ಸಹಚರರು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದ ಹಣದಲ್ಲಿ ಹಲವು ಫ್ಲ್ಯಾಟ್ಗಳನ್ನು ಖರೀದಿಸಿರುವ ಮಾಹಿತಿ ಎಸ್ಐಟಿಗೆ ಲಭಿಸಿದೆ.

ಆ ಪೈಕಿ ಹೈದರಾಬಾದ್ನ ಸೀಮಾಪೇಟೆ, ಮೀಯಾಪುರದಲ್ಲಿ ವರ್ಮಾ ಅವರು ಎರಡು ಫ್ಲ್ಯಾಟ್ ಖರೀದಿಸಿದ್ದು, ಅದರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಂಧನಕ್ಕೆ ಕೆಲವೇ ದಿನಗಳಿದ್ದಾಗ ವರ್ಮಾ ಅವರು ಫ್ಲ್ಯಾಟ್ ಹಾಗೂ ಚಿನ್ನ ಖರೀದಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವರ್ಮಾ ಅವರ ಫ್ಲ್ಯಾಟ್ನಲ್ಲಿ ಈ ಹಿಂದೆ ಪರಿಶೀಲನೆ ನಡೆಸಿದಾಗ ₹8.21 ಕೋಟಿ ನಗದು ಪತ್ತೆಯಾಗಿತ್ತು. ನೋಟು ಎಣಿಕೆ ಯಂತ್ರವನ್ನು ತರಿಸಿ ಎಸ್ಐಟಿ ಅಧಿಕಾರಿಗಳು ಎಣಿಕೆ ಮಾಡಿದ್ದರು.

ಎಫ್ಎಫ್ಸಿಸಿಎಸ್ಎಲ್ನ 18 ಖಾತೆಗಳಿಗೆ ನಿಗಮದ ₹ 94.73 ಕೋಟಿ ಜಮೆ ಆಗಿತ್ತು. ಅಲ್ಲಿಂದ 270ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಇದುವರೆಗೂ 12 ಆರೋಪಿಗಳನ್ನು ಎಸ್ಐಟಿ ಬಂಧಿಸಿದೆ. ಬಂಧಿತರಿಂದ ₹ 14.49 ಕೋಟಿ ನಗದು ಜಪ್ತಿ ಮಾಡಿಕೊಂಡಿದೆ.

ವಿವಿಧ ಬ್ಯಾಂಕ್ಗಳಲ್ಲಿ ತೆರೆಯಲಾಗಿದ್ದ 217 ಖಾತೆ ಗುರುತಿಸಿ ಖಾತೆಯಲ್ಲಿದ್ದ ₹13.72 ಕೋಟಿಯ ವಹಿವಾಟು ಸ್ಥಗಿತಗೊಳಿಸಲಾಗಿದೆ. ವರ್ಮಾ ಸೇರಿದಂತೆ 10 ಮಂದಿ ಆರೋಪಿಗಳು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದ ₹1.50 ಕೋಟಿಯನ್ನು ಜನರೇ ವಾಪಸ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.