ನವದೆಹಲಿ: ಸುದ್ದಿ ಪ್ರಕಾಶಕರ ಜಾಗತಿಕ ಒಕ್ಕೂಟ (WAN-IFRA) ವತಿಯಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ಡಿಜಿಟಲ್ ಮೀಡಿಯಾ ದಕ್ಷಿಣ ಏಷ್ಯಾ ಪ್ರಶಸ್ತಿ-2023ರ ‘ಅತ್ಯುತ್ತಮ ಸುದ್ದಿ ಜಾಲತಾಣ’ (Best News Website) ವಿಭಾಗದಲ್ಲಿ Prajavani.net ಗೆ ದೊರೆತ ರಜತ ಟ್ರೋಫಿಯನ್ನು ಪ್ರಜಾವಾಣಿ ಡಿಜಿಟಲ್ ಸಂಪಾದಕ ಅವಿನಾಶ್ ಬೈಪಾಡಿತ್ತಾಯ, ಮಾತೃಸಂಸ್ಥೆ ದಿ ಪ್ರಿಂಟರ್ಸ್ ಮೈಸೂರು ಪ್ರೈ. ಲಿ. ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಅನೂಪ್ ಮಂಡಲ್, ಡಿಜಿಟಲ್ ಬಿಸಿನೆಸ್ ಮುಖ್ಯಸ್ಥ ಸುಹೇಬ್ ಹುಸೇನ್ ಅವರು ನವದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

ನವದೆಹಲಿಯ ಹಾಲಿಡೇ ಇನ್‌ನಲ್ಲಿ 'ವ್ಯಾನ್-ಇಫ್ರಾ' ಆಯೋಜಿಸಿದ ಎರಡು ದಿನಗಳ ಡಿಜಿಟಲ್ ಮೀಡಿಯಾ ಇಂಡಿಯಾ ಕಾನ್ಫರೆನ್ಸ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ವಿವಿಧ ಜಾಲತಾಣಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
.ಪ್ರಜಾವಾಣಿ ಜಾಲತಾಣಕ್ಕೆ 'ಅತ್ಯುತ್ತಮ ಸುದ್ದಿ ವೆಬ್‌ಸೈಟ್' ರಜತ ಪ್ರಶಸ್ತಿ.
ಸುದ್ದಿ ಪ್ರಕಾಶಕರ ಜಾಗತಿಕ ಒಕ್ಕೂಟ (WAN-IFRA)ದ 7ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದಾಗಿದ್ದು, ಕನ್ನಡದ ಸುದ್ದಿ ಜಾಲತಾಣಕ್ಕೆ ಮನ್ನಣೆ ದೊರೆತಿರುವುದು ವಿಶೇಷ ಹಾಗೂ ಕನ್ನಡಿಗರಿಗೆ ಹೆಮ್ಮೆ.

ಪ್ರಜಾವಾಣಿ ಜಾಲತಾಣದ ವಿಶ್ವಾಸಾರ್ಹತೆ, ಕ್ಷಿಪ್ರ ಸುದ್ದಿಗಳ ಅಪ್‌ಡೇಟ್ಸ್, ತನ್ನದೇ ಆದ ವಿಶಿಷ್ಟ ಯೂನಿಕೋಡ್ ಫಾಂಟ್ ಅಳವಡಿಕೆಯೊಂದಿಗೆ ಇತ್ತೀಚೆಗಷ್ಟೇ ಬದಲಾವಣೆಯಾಗಿದ್ದ ವಿನೂತನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಬಳಕೆ, ಆಕರ್ಷಕ ಮುಖಪುಟ, ಬಳಕೆದಾರ ಇಂಟರ್‌ಫೇಸ್, ಬಳಕೆದಾರರ ಅನುಭವ, ಸುಲಭ ನ್ಯಾವಿಗೇಶನ್ ಮುಂತಾದವನ್ನು ಪರಿಗಣಿಸಿ ಈ ಪ್ರಶಸ್ತಿ ದೊರೆತಿದ್ದು, ಪ್ರಸಿದ್ಧ ಆಂಗ್ಲ ಜಾಲತಾಣ ‘ದಿ ಹಿಂದು’ ಜೊತೆಗೆ ಪ್ರಜಾವಾಣಿಯು ಬೆಳ್ಳಿ ಪದಕದ ಗೌರವಕ್ಕೆ ಭಾಜನವಾಗಿದೆ. ‘ದಿ ಕ್ವಿಂಟ್’ ಜಾಲತಾಣಕ್ಕೆ ಪ್ರಥಮ (ಚಿನ್ನದ) ಪ್ರಶಸ್ತಿ ಹಾಗೂ ‘ಲೈವ್ ಮಿಂಟ್’ ಜಾಲತಾಣಕ್ಕೆ (ತೃತೀಯ) ಕಂಚಿನ ಪುರಸ್ಕಾರ ದೊರೆತಿದೆ.

ಡಿಜಿಟಲ್ ಮೀಡಿಯಾ ದಕ್ಷಿಣ ಏಷ್ಯಾ 2023, 7ನೇ ಆವೃತ್ತಿಯಲ್ಲಿ ಅತ್ಯುತ್ತಮ ಸುದ್ದಿ ವೆಬ್‌ಸೈಟ್ ಅಲ್ಲದೆ ಇತರ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಜಾಲತಾಣಗಳು ಈ ಕೆಳಗಿನಂತಿವೆ:

1. ಅತ್ಯುತ್ತಮ ಡೇಟಾ ವಿಶುವಲೈಸೇಶನ್

ಚಿನ್ನ: ಬಿಬಿಸಿ ನ್ಯೂಸ್

ರಜತ: ದಿ ಕ್ವಿಂಟ್

ಕಂಚು: ಇಂಡಿಯಾ ಟುಡೇ ಗ್ರೂಪ್ ಡಿಜಿಟಲ್

2. ಅತ್ಯುತ್ತಮ ಡಿಜಿಟಲ್ ಚಂದಾದಾರಿಕೆ/ಓದುಗ ಆದಾಯ ಯೋಜನೆ

ಚಿನ್ನ: ಹಿಂದುಸ್ತಾನ್ ಟೈಮ್ಸ್ ಡಿಜಿಟಲ್ ಸ್ಟ್ರೀಮ್ಸ್ ಲಿ.

ರಜತ: ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

ಕಂಚು: ಪ್ರೊಥೊಮ್ ಅಲೊ ಇ-ಎಡಿಶನ್

3. ಅತ್ಯುತ್ತಮ ಫ್ಯಾಕ್ಚ್ ಚೆಕಿಂಗ್ ಯೋಜನೆ

ಚಿನ್ನ: ಜಾಗರಣ್ ನ್ಯೂ ಮೀಡಿಯಾ

ರಜತ: ದಿ ಕ್ವಿಂಟ್

ಕಂಚು: ವೆಬ್‌ಕೂಫ್ (ದಿ ಕ್ವಿಂಟ್)

4. ಅತ್ಯುತ್ತಮ ಆಡಿಯೆನ್ಸ್ ಎಂಗೇಜ್ಮೆಂಟ್

ಚಿನ್ನ: ದಿ ಹಿಂದು ಮೇಡ್ ಆಫ್ ಚೆನ್ನೈ

ರಜತ: ದಿ ಹಿಂದು - ಚೆನ್ನೈ-ಅ-ಮೇಜ್

ಕಂಚು: ಸ್ಲರ್ಪ್ ಕಮ್ಯುನಿಟಿ (ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.)

ತೀರ್ಪುಗಾರರ ವಿಶೇಷ ಪುರಸ್ಕಾರ: ದಿ ಡೈಲಿ ಸ್ಟಾರ್ ಹಾಗೂ ಪ್ರೊಥೊಮ್ ಅಲೊ

5. ಅತ್ಯುತ್ತಮ ಇನ್ನೋವೆಟಿವ್ ಡಿಜಿಟಲ್ ಪ್ರಾಡಕ್ಟ್

ಚಿನ್ನ: ನ್ಯೂಸ್ ಲಾಂಡ್ರಿ ಆ್ಯಪ್

ರಜತ: ಡಿಜಿಟಲವ್ ಸಖಿ ಸ್ಟೋರೀಸ್ (ಪೀಪಲ್ ಲೈಕ್ ಅಲ್ ಕ್ರಿಯೇಟ್)

ಕಂಚು: ಸ್ಲರ್ಪ್.ಕಾಂ, ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

6. ಅತ್ಯುತ್ತಮ ನೇಟಿವ್ ಜಾಹೀರಾತು ಕ್ಯಾಂಪೇನ್

ಚಿನ್ನ: ದಿ ಹಿಂದು ಮೇಡ್ ಆಫ್ ಚೆನ್ನೈ

ರಜತ: ಪ್ರೊಥೊಮ್ ಅಲೊ

ಕಂಚು: ಸ್ಲರ್ಪ್

7. ಅತ್ಯುತ್ತಮ ನ್ಯೂಸ್ ಲೆಟರ್

ಚಿನ್ನ: ಮಿಂಟ್ ಈಸಿನಾಮಿಕ್ಸ್, ಹಿಂದುಸ್ತಾನ್ ಟೈಮ್ಸ್ ಡಿಜಿಟಲ್ ಸ್ಟ್ರೀಮ್ಸ್ ಲಿ.

ರಜತ: ಸ್ಲರ್ಪ್ ನ್ಯೂಸ್ ಲೆಟರ್ - ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

ಕಂಚು: ಒಟಿಟಿ ಪ್ಲೇ ನ್ಯೂಸ್ ಲೆಟರ್ - ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

8. ಅತ್ಯುತ್ತಮ ಪಾಡ್‌ಕಾಸ್ಟ್

ಚಿನ್ನ: ಒಟಿಟಿ ಪ್ಲೇ - ಹಿಂದುಸ್ತಾನ್ ಮೀಡಿಯಾ ವೆಂಚರ್ಸ್

ರಜತ: ನಥಿಂಗ್ ಬಟ್ ಟ್ರುಥ್, ಇಂಡಿಯಾ ಟುಡೇ

ಕಂಚು: ದಿನ್ ಭರ್, ಇಂಡಿಯಾ ಟುಡೇ ಗ್ರೂಪ್

9. ಆದಾಯ ಕಾರ್ಯತಂತ್ರದಲ್ಲಿ ಎಐ ಅತ್ಯುತ್ತಮ ಬಳಕೆ

ಚಿನ್ನ: ಒಟಿಟಿ ಪ್ಲೇ ರೆವಿನ್ಯೂ ಎಐ, ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

ರಜತ: ಸ್ಲರ್ಪ್, ಹಿಂದುಸ್ತಾನ್ ಮೀಡಿಯಾ ವೆಂಚರ್ಸ್ ಲಿ.

ಕಂಚು: ಎಯುಐ ಎಐ - ಅಮರ್ ಉಜಾಲ ವೆಬ್ ಸರ್ವಿಸಸ್

10. ಸುದ್ದಿಮನೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಎಐ ಬಳಕೆ

ರಜತ: ಪ್ರೊಥೊಮ್ ಅಲೊ ಹಾಗೂ ದಿ ಹಿಂದು

ಕಂಚು: ಜಾಗರಣ್ ನ್ಯೂ ಮೀಡಿಯಾ

11. ವಿಡಿಯೊದ ಅತ್ಯುತ್ತಮ ಬಳಕೆ

ಚಿನ್ನ: ದಿ ಕ್ವಿಂಟ್ ಹಾಗೂ ಹಿಂದುಸ್ತಾನ್ ಟೈಮ್ಸ್ ಡಿಜಿಟಲ್ ಸ್ಟ್ರೀಮ್ಸ್ ಲಿ.

ರಜತ: ಡಾಯಿಚ್ ವೆಲ್ಲೆ

ಕಂಚು: ಬಿಬಿಸಿ ನ್ಯೂಸ್

ತೀರ್ಪುಗಾರರ ವಿಶೇಷ ಪುರಸ್ಕಾರ: ಮೋಜೋ ಸ್ಟೋರಿ, ದಿ ಹಿಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.