ಬೆಂಗಳೂರು:  ಬೆಳಿಗ್ಗೆ 7 ಗಂಟೆಯಿಂದ ವೈಟ್‌ಫೀಲ್ಡ್ ಮತ್ತು ಕೆ.ಆರ್.ಪುರ ನಡುವೆ ರೈಲುಗಳ ಕಾರ್ಯಾಚರಣೆ ಮಾಡಲಿವೆ. ಕೊನೆಯ ರೈಲು ಎರಡೂ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ಹೊರಡಲಿವೆ. ಸೋಮವಾರದಿಂದ ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ.

ಈ ಭಾಗದಲ್ಲಿ ಪ್ರಯಾಣಿಸುವ ಜನ ಪ್ರತ್ಯೇಕ ಟೋಕನ್‌ಗಳು, ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಿ ಪಯಣಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕೂಡ ಪ್ರಯಾಣ ಮಾಡಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿಯಿಂದ 195 ಫೀಡರ್ ಬಸ್

ನೇರಳೆ ಮಾರ್ಗವನ್ನು ವೈಟ್‌ಫೀಲ್ಡ್ ತನಕ ವಿಸ್ತರಣೆ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಈ ಮಾರ್ಗದ ಕಾಮಗಾರಿ ಪೂರ್ಣಗೊಂಡಿಲ್ಲ.

ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ ನಡುವೆ ಮೂರು ಕಿಲೋ ಮೀಟರ್‌ನಷ್ಟು ಕಾಮಗಾರಿ ಪ್ರಗತಿಯಲ್ಲಿದೆ. 195 ಬಸ್‌ಗಳನ್ನು ಈ ಮಾರ್ಗದಲ್ಲಿ ಫೀಡರ್ ಸೇವೆಯಾಗಿ ಬಿಎಂಟಿಸಿ ಒದಗಿಸಿದೆ.

ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ನಡುವೆ ಬೆನ್ನಿಗಾನಹಳ್ಳಿ ನಿಲ್ದಾಣ ಇದೆ. ಉಳಿಕೆ ಕಾಮಗಾರಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ಮಾಡಿಕೊಂಡಿದೆ.

ಬೆಂಗಳೂರಿಗೆ ಎನ್‌ಸಿಎಂಸಿ ಕಾರ್ಡ್

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಬಳಕೆಗೆ ಈ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮಾರ್ಚ್ 30ರಿಂದ ಈ ಕಾರ್ಡ್ ಬಳಸಬಹುದಾಗಿದೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಕಾರ್ಡ್ ಪರಿಚಯಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮೊದಲ ಕಾರ್ಡ್ ಬಳಸಿ ಪ್ರಯಾಣ ಮಾಡಿದರು.

ಈ ಕಾರ್ಡ್ ಪಡೆಯದೇ ಬಂದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಇನ್ನೇನು ಪ್ರವೇಶ ದಾಟಬೇಕು ಎನ್ನುವಷ್ಟರಲ್ಲಿ ಅದರ ರೆಕ್ಕೆಗಳು ಬಿಚ್ಚಿಕೊಂಡು, ತಡೆಯೊಡ್ಡಿದವು. ಹಿಂದೆ ಇದ್ದ ಅಧಿಕಾರಿಗಳು ಬೇರೆ ಕಡೆಯಿಂದ ಗೇಟ್ ತೆಗೆದು ಅವರನ್ನು ಕರೆದುಕೊಂಡು ಹೋದರು.

ಪ್ರಯಾಣಿಕರು ಈ ಕಾರ್ಡ್ ಬಳಕೆ ಮಾಡಲು ಕೌಂಟರ್‌ಗಳನ್ನು ತೆರೆಯಬೇಕಿದ್ದು, ಮೂರ್ನಾಲ್ಕು ದಿನಗಳ ಕಾಲಾವಕಾಶ ಬೇಕು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.