ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿವಾರು ಜನಗಣತಿ) ವರದಿಯನ್ನು ಬಿಡುಗಡೆ ಮಾಡಲು ಯಾಕೆ ಮೀನಾಮೇಷ ಎಣಿಸುತ್ತಿದ್ದೀರಿ? ಅಧಿಕಾರ ಹೋದರೆ ಹೋಗಲಿ, ಬೇಗ ಬಿಡುಗಡೆ ಮಾಡಿ. ಇದರಿಂದ ಎಲ್ಲ ಸಮಾಜಗಳಿಗೆ ಅನುಕೂಲವಾಗಲಿದೆ’ ಎಂದು ತಿಂಥಿಣಿ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯಮಂತ್ರಿಯವರ ಎದುರೇ ಮಾತನಾಡಿದರು.

‘ಕೆಲವರು ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಜಾತಿವಾರು ಜನಗಣತಿಯ ವರದಿ ಬಿಡುಗಡೆ ಮಾಡದಂತೆ ಒತ್ತಡ ಹೇರುತ್ತಿದ್ದಾರೆ. ಕೈಕಟ್ಟಿ ಹಾಕುತ್ತಿದ್ದಾರೆ. ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೇ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು. ಅದೇ ರೀತಿ ಕುರುಬ ಸಮುದಾಯದಲ್ಲಿನ 18 ಶ್ರೀಮಂತ ಕಲಾ ಪ್ರಕಾರಗಳನ್ನು ಉಳಿಸಲು ಕುರುಬ ಕಲಾ ಅಕಾಡೆಮಿ ಸ್ಥಾಪನೆ ಮಾಡಬೇಕು. ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರಿಡಬೇಕು’ ಎಂದು ಆಗ್ರಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ‘ಮುಖ್ಯಮಂತ್ರಿ ಅವರಿಗೆ ಕಪ್ಪು ಚುಕ್ಕೆ ಹಚ್ಚುವ ಕೆಲಸ ಈಗ ನಡೆದಿದೆ. ಅವರ ಪರವಾಗಿ ಇಡೀ ಸಮಾಜವಿದೆ. ಕನಕದಾಸರು ಕೂಡ ಅಪಮಾನ ಅನುಭವಿಸಿದ್ದರು. ಅಪಮಾನ ಸಹಿಸಿಕೊಂಡು ಸಮಾಜ ತಿದ್ದುವ ಕೆಲಸ ಮಾಡಿದ್ದರು. ಉತ್ತಮ ಕೆಲಸ ಮಾಡುವವರಿಗೆ ಅಪಮಾನ ತಪ್ಪಿದ್ದಲ್ಲ’ ಎಂದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಉಪಸ್ಥಿತರಿದ್ದರು.

ಬರಹಗಾರರಿಗೆ ಅವಮಾನದ ಆರೋಪ

‘ಸಮಗ್ರ ತತ್ವಪದ ಯೋಜನೆಯ 18 ಸಂಪುಟಗಳನ್ನು ಕನಕ ಜಯಂತಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಕೆಲವೇ ಸಂಪುಟಗಳ ಬರಹಗಾರರನ್ನು ವೇದಿಕೆಗೆ ಕರೆದು ಕೆಲವರನ್ನು ಬಿಟ್ಟು ಅವಮಾನ ಮಾಡಲಾಗಿದೆ’ ಎಂದು ಬರಹಗಾರ ಗಂಗಪ್ಪ ತಳವಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು. 18 ಸಂಪುಟಗಳಲ್ಲಿ ಒಂದಾದ ‘ಗಟ್ಟಹಳ್ಳಿ ಆಂಜನಪ್ಪನವರ ಸುಜ್ಞಾನ ಬೋಧ ತತ್ವಗಳು’ ಎಂಬ ಸಂಪುಟವನ್ನು ಗಂಗಪ್ಪ ತಳವಾರ್ ಸಂಪಾದಿಸಿದ್ದರು. ‘ನಮಗೆ ಆಹ್ವಾನ ನೀಡಿದ್ದಲ್ಲದೇ ಬರುವುದನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಕೆಲವರನ್ನಷ್ಟೇ ವೇದಿಕೆಗೆ ಕರೆದು ನನ್ನ ಹೆಸರನ್ನೂ ಪ್ರಸ್ತಾಪ ಮಾಡದೇ ಅಪಮಾನ ಮಾಡಿದ್ದಾರೆ. ಈ ಯೋಜನೆಯ ಅಧ್ಯಕ್ಷ ನಟರಾಜ್ ಬೂದಾಳ್ ಅವರನ್ನೂ ಕರೆದಿಲ್ಲ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಲೇಖಕರಿಗೆ ನೀಡುವ ಗೌರವ ಪ್ರತಿಯಾದರೂ ಸಿಗಬಹುದು ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಕೇಳಿದರೆ ದುಡ್ಡು ಕೊಟ್ಟು ತೆಗೆದುಕೊಂಡು ಹೋಗಿ ಎಂದು ಇನ್ನಷ್ಟು ಅಪಮಾನ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.