‘ರಾಜೀವ್‌ಗಾಂಧಿ ಆಶಯಕ್ಕೆ ಧಕ್ಕೆ ಬೇಡ’
ರಾಜೀವ್‌ಗಾಂಧಿಯವರು ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ಒಂದೇ ದಿನವೂ ಖಾಲಿ ಇರಬಾರದು ಎಂದು ಸಂವಿಧಾನದಕ್ಕೆ ತಿದ್ದುಪಡಿ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಅವರ ಆಶಯಕ್ಕೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರಗಳು ನಡೆದುಕೊಳ್ಳಬೇಕು. ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡರೂ ಚುನಾವಣೆ ನಡೆಸಲೇಬೇಕು ಇನ್ನಷ್ಟು ವಿಳಂಬ ಮಾಡಬಾರದು.–ಎಂ. ರಾಮಚಂದ್ರಪ್ಪ
‘ಚುನಾವಣೆ ನಡೆದರಷ್ಟೇ ಪ್ರಜಾಪ್ರಭುತ್ವ’
ಪ್ರಜಾಪ್ರಭುತ್ವ ಇರಬೇಕೆಂದರೆ ಚುನಾವಣೆ ನಡೆಯಲೇಬೇಕು. ಚುನಾವಣೆ ನಡೆಸದೇ ಹೋದರೆ ಪ್ರಜಾಪ್ರಭುತ್ವ ಎಲ್ಲಿರುತ್ತದೆ? ಅಧಿಕಾರಿಗಳೇ ಯಾವತ್ತೂ ಅಧಿಕಾರವನ್ನು ನಡೆಸಬಾರದು. ಮಹಾತ್ಮ ಗಾಂಧಿ ನೆಹರೂ ಅವರ ಕಾಳಜಿಯೇ ಅದು. ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಕಾಲಕ್ಕೆ ತಕ್ಕಂತೆ ನಡೆಸಲೇಬೇಕು–ಕೆ. ಚಂದ್ರಶೇಖರ್
‘ದಾರಿ ತಪ್ಪಿಸುತ್ತಿರುವ ಅಧಿಕಾರಿಗಳು’
ಬಿಬಿಎಂಪಿಯಲ್ಲಿ ಅಧಿಕಾರಿಗಳ ದರ್ಪ ಹೆಚ್ಚಾಗಿದೆ. ಜನಪ್ರತಿನಿಧಿಗಳು ಸಚಿವರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಯಾರಿಗೂ ನಗರದ ಆಡಳಿತದ ಮೇಲೆ ನಿಯಂತ್ರಣವಿಲ್ಲ. ಹಿಂದಿನ ತಪ್ಪುಗಳಿಂದ ನಗರದ ಜನತೆಗೆ ಅನುಕೂಲವಾಗುವ ಯಾವ ಕೆಲಸಗಳೂ ನಡೆಯುತ್ತಿಲ್ಲ. ಬಿಬಿಎಂಪಿಗೆ ಮೊದಲು ಚುನಾವಣೆ ಮಾಡಬೇಕು. ನಂತರ ಯಾವುದೇ ರೀತಿಯ ವಿಭಜನೆ ಮಾಡಬಹುದು–ಪಿ.ಆರ್. ರಮೇಶ್
‘ಅಧಿಕಾರ ನೀಡುವ ಮನಸ್ಸಿಲ್ಲ’
ಶಾಶ್ವತವಾಗಿ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಶಾಸಕರು ಹಾಗೂ ಸಚಿವರು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುತ್ತಿಲ್ಲ. ಕಾರ್ಪೊರೇಟರ್‌ಗಳಿದ್ದರೆ ಸ್ಥಳೀಯ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ. ಒಬ್ಬರ ಮೇಲೆ ಇನ್ನೊಬ್ಬರು ಪರಸ್ಪರ ದೂರುತ್ತಾ ಚುನಾವಣೆ ಮುಂದೂಡುತ್ತಿದ್ದಾರೆ. ಇನ್ನು ಯಾವುದೇ ರೀತಿಯಲ್ಲೂ ಬಿಬಿಎಂಪಿಯನ್ನು ವಿಭಜನೆ ಮಾಡಬಾರದು. ಬೆಂಗಳೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು–ಎಸ್.ಕೆ. ನಟರಾಜ್
‘ಎಲ್ಲರೂ ಮುಂದೂಡುತ್ತಲೇ ಇದ್ದಾರೆ’
ಬಿಬಿಎಂಪಿಗೆ ಕಾಲಕಾಲಕ್ಕೆ ಚುನಾವಣೆ ಆಗಲೇಬೇಕು. ಅವಧಿ ಮುಗಿಯುವ ಆರು ತಿಂಗಳ ಮುನ್ನವೇ ಎಲ್ಲ ತಯಾರಿ ಆರಂಭವಾಗಬೇಕು ಎಂದು ರೂಲ್ ಬುಕ್‌ನಲ್ಲೇ ಇದೆ. ಆದರೆ ಎಲ್ಲ ಸರ್ಕಾರಗಳೂ ಅದನ್ನು ಪಾಲಿಸದೆ ಚುನಾವಣೆಯನ್ನು ಮುಂದೂಡುತ್ತಲೇ ಬಂದಿವೆ. ಬೇಕೆಂದೇ ಯಾವುದೋ ಕಾರಣ ನೀಡಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಇನ್ನು ನಾಲ್ಕೈದು ಬೆಂಗಳೂರು ಪಾಲಿಕೆ ಮಾಡುತ್ತೇವೆ ಎಂಬುದು ಚುನಾವಣೆ ಮುಂದೂಡುವ ತಂತ್ರವಷ್ಟೇ.–ಕಟ್ಟೆ ಸತ್ಯನಾರಾಯಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.