ರಾಜರಾಜೇಶ್ವರಿನಗರ: ಮಾಗಡಿ ರಸ್ತೆಯ ಗೊಲ್ಲರಹಟ್ಟಿ, ಭರತ್ನಗರ, ಎಂಪಿಎಂ ಬಡಾವಣೆ, ನಾಗರಭಾವಿ, ಮಲ್ಲತಹಳ್ಳಿ, ಉಲ್ಲಾಳು, ಡಿ.ಗ್ರೂಪ್ ಬಡಾವಣೆ ಸೇರಿದಂತೆ ಹಲವೆಡೆ ಮಳೆ ಮತ್ತು ಗಾಳಿ ಅಬ್ಬರಕ್ಕೆ ಹಲವಾರು ಮರಗಳು ಉರುಳಿ ಬಿದ್ದಿವೆ.

ಇದರಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿ ನಾಗರಿಕರು ತೊಂದರೆ ಅನುಭವಿಸಿದರು. 12 ಮರಗಳು, 32ಕ್ಕೂ ಹೆಚ್ಚು ಬೃಹತ್ ಮರದ ಕೊಂಬೆಗಳು ಮಳೆ ಗಾಳಿಗೆ ಬಿದ್ದಿವೆ. ನಾಲ್ಕೈದು ವಿದ್ಯುತ್ ಕಂಬಗಳು ಮುರಿದಿವೆ.

ಮನೆಯ ಕಾಂಪೌಂಡ್ ಮತ್ತು ಕೆಲವು ಮನೆಯ ಮೇಲೆ ಕೊಂಬೆಗಳು ಬಿದ್ದಿರುವುದರಿಂದ ಸಣ್ಣ ಪುಟ್ಟ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿ, ನಷ್ಟವುಂಟಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಬಡಾವಣೆಗಳಲ್ಲಿ ಮನೆ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವ ಮಾಲೀಕರು ಮರದ ಬುಡಗಳಿಗೆ ಕಾಂಕ್ರೀಟ್ ಹಾಕುವುದು ಮತ್ತು ರಸ್ತೆ ನಿರ್ಮಾಣದ ಸಮಯದಲ್ಲಿ ಡಾಂಬರ್ ಅನ್ನು ಮರದ ಸುತ್ತಲು ಹಾಕುವುದರಿಂದ ಬೇರುಗಳಿಗೆ ನೀರು ಹೋಗುವುದಿಲ್ಲ. ಬೇರುಗಳು ಆಳವಾಗಿ ಭೂಮಿಗೆ ಹೋಗದ ಕಾರಣ ಮೇಲ್ಭಾಗದಲ್ಲಿರುವುದರಿಂದ ಮಳೆ ಬಂದಾಗ ಸಣ್ಣ ಗಾಳಿಗೂ ಉರುಳಿ ಬೀಳುತ್ತಿವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ರಾಜರಾಜೇಶ್ವರಿನಗರ ವಲಯದ ಉಪವಲಯ ಅರಣ್ಯಾಧಿಕಾರಿ ವಿ.ಜಗದೀಶ್, ವಲಯ ಅರಣ್ಯಾಧಿಕಾರಿ ಮುತ್ತುರಾಜು ಮತ್ತು ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿರುವ ಮರ ಕೊಂಬೆಗಳನ್ನು ತೆರವುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.