ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಒಡೆಯರ್ ಜೀವನ ಆದರ್ಶವಾಗಲಿ’

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 138ನೇ ಜಯಂತಿ ಆಚರಣೆ
Published : 4 ಜೂನ್ 2022, 19:55 IST
ಫಾಲೋ ಮಾಡಿ
Comments

ಬೆಂಗಳೂರು: ‘ಆರ್ಥಿಕ ಕ್ಷೇತ್ರದಲ್ಲಿ ಸಬಲತೆ ಸಾಧಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ದೂರದೃಷ್ಟಿಯಿಂದ ಮೈಸೂರು ಬ್ಯಾಂಕ್ ಸ್ಥಾಪಿಸಿದ್ದರು. ಮೈಸೂರು ಬ್ಯಾಂಕ್ ಇನ್ನೊಂದು ಬ್ಯಾಂಕ್ ಜೊತೆಗೆ ವಿಲೀನವಾದ ಸಂದರ್ಭದಲ್ಲಿ ಸರ್ಕಾರವಾಗಲಿ, ನಾವಾಗಲಿ ವಿರೋಧಿಸದೇ ಹೋಗಿದ್ದು ದುರಂತ’ ಎಂದು ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ಎಂ.ನರಸಿಂಹ ವಿಷಾದಿಸಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 138ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ರಾಜಕಾರಣಿಗಳಿಗೆ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜೀವನವೇ ಒಂದು ಸಂದೇಶ ಮತ್ತು ಆದರ್ಶವಾಗಬೇಕು’ ಎಂದು ಹೇಳಿದರು. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಮಕುಲಪತಿ ಪ್ರೊ.ಎಸ್‌.ಚಂದ್ರಶೇಖರ್ ಮಾತನಾಡಿ, ‘ಅರಮನೆಯ ವೆಚ್ಚಕ್ಕೆಂದು ರಾಜ್ಯದ ವರಮಾನದಲ್ಲಿ ಶೇ 10ರಷ್ಟು ಖರ್ಚು ಮಾಡಲು ಅವಕಾಶವಿದ್ದರೂ, ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರು ಸರಳ ಜೀವನ ನಡೆಸಿದರು. ಮೈಸೂರಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ದೇಶದಲ್ಲಿಯೇ ಮೊಟ್ಟಮೊದಲು ಜಾರಿಗೆ ತಂದರು’ ಎಂದು ಹೇಳಿದರು.
‘ಇವತ್ತು ಹಿಜಾಬ್‌ ಇತ್ಯಾದಿ ಗದ್ದಲಗಳು ನಡೆಯುತ್ತಿವೆ. ನಾಲ್ವಡಿ ಅವರು ನಿಜವಾದ ಆದರ್ಶ ಮನುಷ್ಯ. ಬಡವರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ತಿಂಗಳಿಗೆ ₹ 5 ಕೊಡುವ ಯೋಜನೆ ಜಾರಿಗೊಳಿಸಿದ್ದರು. ಇದರಿಂದ ಹೆಣ್ಣುಮಕ್ಕಳು ಶಾಲೆಗೆ ಬರುವಂತಾಯಿತು’ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಮಾ ಬಸವರಾಜು, ಎಲ್.ಹರ್ಷ, ಡಾ.ಹಂ.ಗು. ರಾಜೇಶ್, ಪದಾಧಿಕಾರಿಗಳಾದ ಎಸ್.ತಿಮ್ಮಯ್ಯ, ಮಾಗಡಿ ಗಿರೀಶ್, ವಿಜಯಲಕ್ಷ್ಮಿ ಸತ್ಯಮೂರ್ತಿ, ಇಂದಿರಾ ಸರಣ್ ಜಮ್ಮಲದಿನ್ನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT