ಬೆಂಗಳೂರು: ವರ್ಷದ ಹಿಂದೆ ಕೆ.ಆರ್. ಸರ್ಕಲ್ ಕೆಳ ಸೇತುವೆಯಲ್ಲಿ ಕಾರು ಮುಳುಗಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಮೂವರು ಎಂಜಿನಿಯರ್ಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಪೊಲೀಸರು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

2023ರ ಮೇ 21ರಂದು ಆಂಧ್ರಪ್ರದೇಶದ ಟೆಕ್ಕಿ ಬತುಲಾ ಭಾನು ರೇಖಾ (23) ಅವರು ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ಪ್ರವಾಸ ಹೊರಟಿದ್ದರು. ಮಳೆಗೆ ಕೆ.ಆರ್. ಸರ್ಕಲ್ ಕೆಳ ಸೇತುವೆ ಜಲಾವೃತಗೊಂಡಿತ್ತು. ಚಾಲಕ ಹರೀಶ್ ಗೌಡ ಈ ಕೆಳ ಸೇತುವೆಯಲ್ಲಿ ಕಾರು ಚಲಾಯಿಸಿದ್ದರು. ಕಾರು ಅರ್ಧದಲ್ಲಿಯೇ ನಿಂತಿತ್ತು. ಚಾಲಕ ಮತ್ತು ಇತರರು ಇಳಿದು ಪಾರಾಗಿದ್ದರು. ಬತುಲಾ ಭಾನು ರೇಖಾ ಅವರು ಕಾರಲ್ಲಿಯೇ ಸಿಲುಕಿ ಮೃತಪಟ್ಟಿದ್ದರು. ಅವರ ಸಹೋದರ ನೀಡಿದ ದೂರಿನಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಹರೀಶ್ ಗೌಡ ಪ್ರಮುಖ ಆರೋಪಿಯಾಗಿದ್ದರು. ಇದೀಗ 14 ತಿಂಗಳ ಬಳಿಕ ಆರೋಪ ಪಟ್ಟಿ ಸಿದ್ಧಗೊಂಡಿದೆ. ಕೆಳಸೇತುವೆಯನ್ನು ಸರಿಯಾಗಿ ನಿರ್ವಹಿಸದ ಆರೋಪದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಜೂನಿಯರ್ ಎಂಜಿನಿಯರ್ಗಳ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.