ಬೆಂಗಳೂರು: ರಾಜಧಾನಿ ಬೆಂಗಳೂರಿ ನಲ್ಲಿ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಇಳಿವಯಸ್ಸಿ
ನಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಹಿರಿಜೀವಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಹಾಯವಾಣಿಗೆ ಬಂದ ಕರೆ ಗಳ ಅಂಕಿಅಂಶಗಳೇ ದೃಢಪಡಿಸುತ್ತಿವೆ.

ನಗರದಲ್ಲಿ ನೈಟಿಂಗೇಲ್ಸ್ ಟ್ರಸ್ಟ್ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಿರಿಯರ ಸಮಸ್ಯೆ ಪರಿಹರಿಸಲು ‘ಸಹಾಯವಾಣಿ’ ಆರಂಭಿ ಸಲಾಗಿತ್ತು. 20 ವರ್ಷಗಳಲ್ಲಿ ಸಹಾಯ ಕೋರಿ 2.35 ಲಕ್ಷ ಮಂದಿ ಹಿರಿಯರು ಸಹಾಯವಾಣಿ ಸಂಪರ್ಕಿಸಿದ್ದಾರೆ. ಅದರಲ್ಲಿ 10,591 ಗಂಭೀರ ಸ್ವರೂಪದ ದೂರುಗಳಾಗಿವೆ. ‘ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ’ಯು ಬುಧವಾರ ನಡೆಯುತ್ತಿದ್ದು, ಅವರ ಸುರಕ್ಷತೆ ವಿಚಾರವು ಆಲೋಚಿಸುವಂತೆ ಮಾಡಿದೆ.

‘ಇತ್ತೀಚಿನ ಒತ್ತಡದ ಜೀವನ ಶೈಲಿಯು ಹಿರಿಯರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಹಾಯವಾಣಿಗೆ ಬಂದಿರುವ ಕರೆಗಳಲ್ಲಿ ಶೇ 40ರಷ್ಟು ಕರೆಗಳು ಕುಟುಂಬದವರು ಹಾಗೂ ಮಕ್ಕಳಿಂದಲೇ ನಿಂದನೆಗೆ ಒಳಗಾಗಿರುವ ಪ್ರಕರಣಗಳಾಗಿವೆ’ ಎಂದು ನೈಟಿಂಗೇಲ್ಸ್ ಟ್ರಸ್ಟ್‌ನ ಟ್ರಸ್ಟಿ ಡಾ.ರಾಧಾ ಎಸ್. ಮೂರ್ತಿ ತಿಳಿಸುತ್ತಾರೆ.

‘ದೇಶದಲ್ಲಿ ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಕೊನೆ ಕಾಲದಲ್ಲಿ ತಂದೆ, ತಾಯಿಯನ್ನೇ ಪ್ರೀತಿಯಿಂದ ಕಾಣಬೇಕಾದವರೇ ನಿರ್ಲಕ್ಷ್ಯ ವಹಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಬೆಂಗಳೂರಿನಲ್ಲಿ ಸಹಾಯವಾಣಿಗೆ ಬಂದಿರುವ ದೂರು ಗಳಲ್ಲಿ ಶೇ 80ರಷ್ಟು ದೂರುಗಳು ಕಿರುಕುಳ, ನಿರ್ಲಕ್ಷ್ಯ, ದೌರ್ಜನ್ಯ, ಹಣ ಅಥವಾ ಆಸ್ತಿಗಾಗಿ ಬೇಡಿಕೆಯ ದೂರುಗಳಾಗಿವೆ.

ದಾಖಲಾದ ದೂರುಗಳಲ್ಲಿ ಶೇ 69ರಷ್ಟು ದೂರುಗಳನ್ನು ಆಪ್ತ ಸಮಾಲೋಚನೆ ಮೂಲಕವೇ ಪರಿ
ಹರಿಸಲಾಗಿದೆ’ ಎಂದು ರಾಧಾ ಮಾಹಿತಿ ನೀಡುತ್ತಾರೆ.

‘ಕೌಟುಂಬಿಕ ವಿವಾದದಲ್ಲಿ ಸಮನ್ವಯತೆ ತರಲು ಪ್ರಯತ್ನಿಸಲಾಗುತ್ತಿದೆ. ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ಕೂಡಲೇ ಮನೆಗೆ ಭೇಟಿ ನೀಡಲಾಗುತ್ತಿದೆ. ಕಾಣೆಯಾದ ಹಿರಿಯರನ್ನು ಪತ್ತೆಹಚ್ಚಿ ಆಶ್ರಯ ಕಲ್ಪಿಸುತ್ತಿದ್ದೇವೆ. ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕವೂಪರಿಹರಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೂರು ವರ್ಷಗಳಲ್ಲಿ ಸಹಾಯವಾಣಿಗೆ ಬಂದ ಗಂಭೀರ ಸ್ವರೂಪದ ಪ್ರಕರಣಗಳ ಸಂಖ್ಯೆ (ವರ್ಷ; ಪ್ರಕರಣ, ಸಂಖ್ಯೆ)
2019–20; 251
2020–21; 262
2021–22; 203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.