ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಸಡಿಲಿಕೆಯಾದ ತಕ್ಷಣವೇ ಸಾರ್ವಜನಿಕರ ಬಳಕೆಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

ವಾಹನ ದಟ್ಟಣೆ ನಿಯಂತ್ರಿಸಲು ಎಪಿಎಂಸಿ ನಿಧಿಯಿಂದ ₹80 ಕೋಟಿ ವೆಚ್ಚದಲ್ಲಿ ಎಲ್ಲ ಸೌಲಭ್ಯಗಳು ಇರುವ 10 ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ 735 ಕಾರುಗಳು ಹಗೂ 110 ಬೈಕ್ಗಳ ನಿಲುಗಡೆಗೆ ಅವಕಾಶವಿದೆ. ಜನವರಿ 11ರಂದು ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಆ ಟೆಂಡರ್ನಲ್ಲಿ ಯಾವುದೇ ಸಂಸ್ಥೆ ಹಾಗೂ ಏಜೆನ್ಸಿಯವರು ಭಾಗವಹಿಸಿರಲಿಲ್ಲ. ಅದಾದ ಮೇಲೆ ಮಾರ್ಚ್ 1ರಂದು ಸಮಿತಿ ಸಭೆ ನಡೆಸಿ, ತಿಂಗಳ ಟೆಂಡರ್ ಮೊತ್ತ ನಿಗದಿ ಪಡಿಸಿಕೊಂಡು ಅಥವಾ ಪಾರ್ಕಿಂಗ್ ಸೇವೆಯಿಂದ ಬರುವ ಮೊತ್ತದಲ್ಲಿ ಶೇಕಡವಾರು ಆದಾಯ ಹಂಚಿಕೆ ಆಧಾರದಲ್ಲಿ ಟೆಂಡರ್ ಆಹ್ವಾನಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗಿತ್ತು. ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಆದ್ದರಿಂದ ಬಳಕೆಗೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಯ ಮೇ 27ರ ಸಂಚಿಕೆಯಲ್ಲಿ ಬಹುಮಹಡಿ ಕಟ್ಟಡ ವ್ಯರ್ಥ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟವಾಗಿತ್ತು.
.ಯಶವಂತಪುರ: ₹85 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್ ಕಟ್ಟಡ ವ್ಯರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.