ಬೆಂಗಳೂರು: ‘ನಮ್ಮ ಭಾಷೆಯನ್ನು ಗೌರವಿಸಿ, ಪ್ರೀತಿಸುವ ರೀತಿಯಲ್ಲಿಯೇ ದೇಶದ ಇತರ ಭಾಷೆಗಳನ್ನು ಪ್ರೀತಿಸಿ ಸೌಹಾರ್ದ ಕಾಪಾಡಬೇಕು’ ಎಂದು ಲೇಖಕ ಅಜಯ್‌ಕುಮಾರ್ ಸಿಂಗ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಮಾನವನ ವಿಕಾಸಕ್ಕೆ ಭಾಷೆ ಅಗತ್ಯ. ಧರ್ಮ ಹಾಗೂ ಭಾಷಾ ವೈವಿಧ್ಯದಲ್ಲಿ ಏಕತೆ ಸಾಧಿಸಿರುವುದು ಭಾರತೀಯ ಸಮಾಜದ ವೈಶಿಷ್ಟ್ಯ. ಆ ಏಕತೆಯನ್ನು ಕಾಪಾಡಬೇಕಿದೆ’ ಎಂದರು.

‘ಕನ್ನಡ ಭಾಷೆಗೆ ತನ್ನದೆ ಆದ ಘನತೆ ಮತ್ತು ಗಟ್ಟಿತನ ಇದೆ. ಕೆಲವೆಡೆ ಬೇರೆ ಭಾಷೆಯ ನಾಮಫಲಕಗಳನ್ನು ಹಾಕಿದ ಮಾತ್ರಕ್ಕೆ ಕನ್ನಡ ಭಾಷೆಗೆ ಧಕ್ಕೆ ಆಗಲ್ಲ’ ಎಂದು ಅವರು ಹೇಳಿದರು.

ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ನಾವು ಭಾರತೀಯ ಸಾಹಿತ್ಯಕ್ಕಿಂತ ಯುರೋಪಿನ ಸಾಹಿತ್ಯವನ್ನು ಹೆಚ್ಚು ತಿಳಿಯುತ್ತಿದ್ದೇವೆ. ದೇಶದ ಅನೇಕ ಭಾಷೆಗಳ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡಿದೆ. ನಾವು ವರ್ಡ್ಸ್‌ವರ್ತ್, ಎಲಿಯಟ್ ಕವಿಗಳನ್ನು ಓದಿದ್ದಂತೆ, ತಮಿಳಿನ ಕವಿತೆ, ತೆಲುಗಿನ ಕಥೆ, ಮಲಯಾಳಂನ ಕಾದಂಬರಿಗಳನ್ನೂ ಓದಬೇಕು’ ಎಂದು ತಿಳಿಸಿದರು.

‘ಹಿಂದಿಯ ಪ್ರೇಮ್‌ಚಂದ್, ತಮಿಳಿನ ಜೈಕಾಂತ್, ತೆಲುಗಿನ ದಿಗಂಬರ ಕವಿಗಳ ಸಾಹಿತ್ಯವನ್ನು ತಿಳಿಯಬೇಕು. ಆಗ ದೇಶದಲ್ಲಿನ ವೈವಿಧ್ಯಮಯ ಜನಜೀವನದ ಪರಿಚಯ ಆಗುತ್ತದೆ’ ಎಂದರು.

‘ನಿರಂಜನ, ಶಿವರಾಮ ಕಾರಂತರ ಸಾಹಿತ್ಯ ಮಲಯಾಳಂಗೆ ಅನುವಾದಗೊಂಡಿದೆ. ಅಲ್ಲಿನ ಜನರು ಅನುವಾದಿತ ಸಾಹಿತ್ಯವನ್ನು ಇಷ್ಟಪಟ್ಟು ಓದುತ್ತಾರೆ. ನಾವೂ ಆ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ‘ಇಂದು ಕೋಮು, ಲಿಂಗ ಮತ್ತು ಭಾಷಾ ಸೌಹಾರ್ದತೆ ಕಡಿಮೆ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈಗಿನ ಸಂದರ್ಭದಲ್ಲಿ ಇಂತಹ ದಿನಾಚರಣೆಗಳು ಅಗತ್ಯವಾಗಿವೆ. ಮುಂದಿನ ದಿನಗಳಲ್ಲಿ ಕಲಬುರ್ಗಿಯಲ್ಲಿ ಕೋಮು ಸೌಹಾರ್ದ ದಿನಾಚರಣೆ ನಡೆಸುವ ಉದ್ದೇಶ ಇದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಹುಭಾಷಾ ಗಾಯನ, ಕವಿಗೋಷ್ಠಿ ಮತ್ತು ಜನಪದ ಕಲೆಗಳ ಪ್ರದರ್ಶನಗಳು ನಡೆದವು. ಚೆನ್ನೈನಲ್ಲಿ ಸರ್ವಜ್ಞರ ಮೂರ್ತಿ ಮತ್ತು ಬೆಂಗಳೂರಿನಲ್ಲಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಸ್ಥಾಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.