ಬಸವಕಲ್ಯಾಣ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಾನಕ್ಕೆ ಇಬ್ಬರ ನೇಮಕಾತಿ ಆಗಿದ್ದರಿಂದ ಗುರುವಾರ ಶಿಕ್ಷಕರಲ್ಲಿ ಗೊಂದಲ ಸೃಷ್ಟಿ ಆಗಿತ್ತು.

ಚನ್ನಬಸಪ್ಪ ಹಳ್ಳದ್ ಅವರು ವರ್ಗವಾದ ನಂತರ ಶಂಕರೆಪ್ಪ ದೇಶಮುಖ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮರುದಿನ ಅದೇ ಸ್ಥಾನಕ್ಕೆ ಚಂದ್ರಶೇಖರಗೌಡ ಎನ್ನುವವರು ಬಂದಿದ್ದಾರೆ. ಒಬ್ಬರು ಕಡತಗಳನ್ನು ಪರಿಶೀಲಿಸಿದರೆ ಇನ್ನೊಬ್ಬರು ಶಾಲೆಗಳ ಪರಿಶೀಲನೆಗೆ ಹೋಗಿದ್ದರು ಎನ್ನಲಾಗಿದೆ.

ಚಂದ್ರಶೇಖರಗೌಡ ಅವರಿಗೆ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಿಂದ ನೇಮಕಾತಿ ಆದೇಶ ನೀಡಲಾಗಿದ್ದು, ಶಂಕರೆಪ್ಪ ದೇಶಮುಖ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಚೇರಿಯಲ್ಲಿದ್ದ ಅಧಿಕಾರಿಯೊಬ್ಬರು ನನಗೆ ನವೆಂಬರ್ 3ರಂದೇ ಆದೇಶ ನೀಡಲಾಗಿದೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಪ್ರಜಾವಾಣಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.