ಬಸವಕಲ್ಯಾಣ: ತಾಲ್ಲೂಕಿನ ಹಳ್ಳಿ ಗ್ರಾಮದ ಮಹಾದೇವ ದೇವಸ್ಥಾನ ಶಿಲ್ಪಸೌಂದರ್ಯದಿಂದ ಕೂಡಿದೆ. ತ್ರಿಕೋನ ಆಕೃತಿಯ ಅಪರೂಪದ ಈ ದೇವಸ್ಥಾನದ ಪ್ರತಿ ಮೂಲೆಗೆ ಗರ್ಭಗುಡಿ ಇದ್ದು ಮೂರರಲ್ಲೂ ಶಿವಲಿಂಗಗಳಿವೆ.

ಗ್ರಾಮದ ಉತ್ತರಕ್ಕೆ ಅರ್ಧ ಕಿ.ಮೀ. ಅಂತರದಲ್ಲಿ ಈ ಸ್ಥಳವಿದೆ. ಹೊರಗಿನಿಂದ ಮನೆಯಂತೆ ಕಂಡರೂ ಒಳಗೆ ಪ್ರವೇಶಿಸಿದಾಗ ಶಿಲ್ಪಕಲಾ ವೈಭವ ಎದುರಿಗೆ ತೆರೆದುಕೊಳ್ಳುತ್ತದೆ. ದಕ್ಷಿಣಾಭಿಮುಖವಾಗಿ ಪ್ರವೇಶ ದ್ವಾರವಿದ್ದರೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣಾಭಿಮುಖವಾದ ಮೂರು ಗರ್ಭಗುಡಿಗಳು ಒಳಗಿವೆ. ಪ್ರತಿ ಗರ್ಭಗುಡಿಯ ವಿನ್ಯಾಸ ಒಂದೇ ತೆರನಾಗಿದೆ. ಮೂರರಲ್ಲಿನ ಶಿವಲಿಂಗಗಳು ಸಹ ಒಂದೇ ಆಕಾರದಲ್ಲಿವೆ.

ಪಶ್ಚಿಮಾಭಿಮುಖವಾದ ಗರ್ಭಗುಡಿ
ಯಲ್ಲಿ ಶಿವಲಿಂಗದ ಜತೆಯಲ್ಲಿ ಮಹಾದೇವ ಪಾರ್ವತಿಯ ಮೂರ್ತಿಗಳು ಸಹ ಇವೆ. ಆದ್ದರಿಂದ ಭಕ್ತರು ಇದನ್ನು ಮಹಾದೇವ ದೇವಸ್ಥಾನ ಎಂದೇ ಗುರುತಿಸಿದ್ದಾರೆ. ಮೂರು ಲಿಂಗಗಳಿರುವ ಕಾರಣ ಮೂರುಲಿಂಗೇಶ್ವರ ಹಾಗೂ ತ್ರಿಕೂಟ ದೇವಸ್ಥಾನ ಎಂದು ಸಹ ಕೆಲ ದಾಖಲೆಗಳಲ್ಲಿ ನಮೂದಾಗಿದೆ. ತಾಲ್ಲೂಕಿ
ನಲ್ಲಿನ ಈ ರೀತಿ ವೈಶಿಷ್ಟ್ಯತೆ ಹೊಂದಿರುವ ದೇವಸ್ಥಾನ ಇದೊಂದೇ ಆಗಿದೆ.

ಹೊರಗಿನಿಂದ ಕೆಂಪು ಕಲ್ಲಿನ ರಚನೆ ಇದ್ದರೂ ಒಳಗೆ ಕಪ್ಪು ಕಲ್ಲಿನ ಸುಂದರವಾದ ಕೆತ್ತನೆಯ ಕಲ್ಲಿನ ಕಂಬಗಳಿವೆ. ಇಂತಹ ಕಲ್ಲಿನಿಂದಲೇ ಒಳಗೋಡೆ ಕಟ್ಟಲಾಗಿದೆ. ಪ್ರತಿ ಗೋಡೆಯಲ್ಲಿಯೂ ಶಿವ ಪಾರ್ವತಿ ಹಾಗೂ ಇತರೆ ಮೂರ್ತಿಗಳನ್ನು ಅಳವಡಿಸಲಾಗಿದೆ. ‘ಪ್ರತಿ ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆ, ಅಭಿಷೇಕ ನಡೆಯುತ್ತದೆ. ಗ್ರಾಮದಿಂದ ಇಲ್ಲಿಗೆ ಬರುವುದಕ್ಕೆ ರಸ್ತೆಯೂ ನಿರ್ಮಾಣ ಆಗಿದೆ' ಎಂದು ಪ್ರಮುಖರಾದ ಹಣಮಂತ ಪಾಟೀಲ ತಿಳಿಸಿದರು.

‘ಸಾಕಷ್ಟು ಪ್ರಯತ್ನದಿಂದ ಇಲ್ಲಿ ಸಮುದಾಯ ಭವನ ಮಂಜೂರು ಮಾಡಿಸಿಕೊಂಡಿದ್ದು ಅಡಿಪಾಯ ಹಾಕಲಾಗಿದೆ. ಸ್ವಾಗತ ಕಮಾನು ನಿರ್ಮಿಸುವುದು ಹಾಗೂ ಇತರೆ ಅಭಿವೃದ್ಧಿ ಕಾರ್ಯ ಕೈಗೊಂಡರೆ ಇದು ಇನ್ನಷ್ಟು ಭಕ್ತರನ್ನು ಆಕರ್ಷಿಸಬಲ್ಲದು. ಇಲ್ಲಿನ ಶಿಲ್ಪಶೈಲಿಗೆ ಅನುಗುಣವಾಗಿ ಜೋರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ' ಎಂಬುದು ಅವರ ಅಭಿಪ್ರಾಯ.

‘ಗ್ರಾಮದ ವ್ಯಾಪ್ತಿಯಲ್ಲಿ 12ನೇ ಶತಮಾನದ ಶರಣ ಹರಳಯ್ಯನವರ ಗುಡಿ ಸಹ ಇದ್ದು ಈ ಬಗ್ಗೆ ಹಾಗೂ ಮಹಾದೇವ ದೇವಸ್ಥಾನದ ಕುರಿತಾಗಿ ಸಂಬಂಧಿತರು ಸಂಶೋಧನೆ ಕೈಗೊಂಡು ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು' ಎಂದು ಸೂರ್ಯಕಾಂತ ಮತ್ತು ವಿಜಯಕುಮಾರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.