ಔರಾದ್: ತಾಲ್ಲೂಕಿನ ಕೌಠಾ (ಬಿ) ಬಳಿ ಮಾಂಜ್ರಾ ನದಿ ದಂಡೆ ಮೇಲೆ ದೊಡ್ಡ ಮೊಸಳೆವೊಂದು ಪತ್ತೆಯಾಗಿದೆ.

ಎರಡು ದಿನದ ಹಿಂದೆ ಮಧ್ಯರಾತ್ರಿ ಬೀದರ್-ಔರಾದ್ ಹೆದ್ದಾರಿ ಮೇಲೆ ಈ ಮೊಸಳೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಗಮನಿಸಿ ಗ್ರಾಮಸ್ಥರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

’ಬೀದರ್-ಔರಾದ್ ರಸ್ತೆ ಮೇಲೆ ಮೊಸಳೆ ಬಂದಿರುವುದು ನಮಗೂ ತಿಳಿದಿದೆ. ಇದು ಐದರಿಂದ ಆರು ಅಡಿ ಉದ್ದದ ದೊಡ್ಡ ಮೊಸಳೆ. ನಮ್ಮಲ್ಲಿ ಸಾಮಾನ್ಯವಾಗಿ ಕಪ್ಪು ಬಣ್ಣದ ಮೊಸಳೆ ಇರುತ್ತವೆ. ಆದರೆ ಇದು ಹಳದಿ ಬಣ್ಣದಿದೆ. ಇದು ಮಾಂಜ್ರಾ ನದಿ ಮೂಲಕ ಬೇರೆ ಕಡೆಯಿಂದ ಬಂದಿರುವ ಸಾಧ್ಯತೆ ಇದೆ’ ಎಂದು ವಲಯ ಅರಣ್ಯಾಧಿಕಾರಿ ಅಲಿಯೋದ್ದಿನ್ ತಿಳಿಸಿದ್ದಾರೆ.

ಈ ದೊಡ್ಡ ಮೊಸಳೆ ಊರು ಪಕ್ಕದಲ್ಲೇ ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭೀತಿಯಾಗಿದೆ. ಹೀಗಾಗಿ ಇದನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ಕೌಠಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.