ಬೀದರ್: ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿವಾರವೂ ಮಳೆಯಾಗಿದ್ದು, ವರ್ಷಧಾರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
.ಬೀದರ್: ತ್ರಿಬಲ್ ರೈಡಿಂಗ್ಗಿಲ್ಲ ಕಡಿವಾಣ; CCTV ಕ್ಯಾಮೆರಾ ಅಳವಡಿಕೆ ನಿರಾಸಕ್ತಿ.
ಶುಕ್ರವಾರವೂ ಮಳೆಯಾಗಿತ್ತು. ಶನಿವಾರ ಬೆಳಿಗ್ಗೆಯಿಂದಲೇ ದಟ್ಟ ಕಾರ್ಮೋಡ ಕವಿದಿದ್ದು, ಜಿಟಿಜಿಟಿ ಹನಿಗಳು ಉದುರಿದವು. ಮಧ್ಯಾಹ್ನ ಹಾಗೂ ಸಂಜೆ ವೇಳೆ ಬಿರುಸಾಗಿ ಮಳೆ ಸುರಿಯಿತು. ಬಿಡುವು ಕೊಡದೆ ಮಳೆ ಸುರಿಯುತ್ತಿರುವ ಕಾರಣ ಜನರ ದೈನಂದಿನ ಕೆಲಸಗಳಿಗೆ ತೊಡಕಾಯಿತು. ಜಿಲ್ಲೆಯಲ್ಲಿ ಈಗಲೂ ಹೆಸರು ಕಾಳು, ಉದ್ದು ರಾಶಿ ಕಾರ್ಯ ನಡೆಯುತ್ತಿದ್ದು, ಅದಕ್ಕೂ ತೊಡಕಾಯಿತು. ರಾಶಿ ಮಾಡಿದವರು ಮಾರುಕಟ್ಟೆ ಸಾಗಿಸಲು ಸಮಸ್ಯೆಯಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ನೆನೆದುಕೊಂಡೇ ಮನೆಗಳತ್ತ ಹೆಜ್ಜೆ ಹಾಕಿದರು.
.ಬೀದರ್: ಭಾಗ್ಯಲಕ್ಷ್ಮಿ ಬಾಂಡ್ ನೀಡಲು ಲಂಚ ಪಡೆದ ಅಂಗನವಾಡಿ ಕಾರ್ಯಕರ್ತೆ.
ಇನ್ನೂ ದಟ್ಟ ಮೋಡಗಳು, ಮಳೆಯ ಕಾರಣಕ್ಕಾಗಿ ಭಾರತೀಯ ವಾಯುಪಡೆಯಿಂದ ನಗರದ ಬಹಮನಿ ಕೋಟೆ ಮೇಲೆ ಹಮ್ಮಿಕೊಂಡಿದ್ದ ಎರಡನೇ ದಿನದ ‘ಏರ್ ಶೋ’ ಕಾರ್ಯಕ್ರಮ ರದ್ದುಪಡಿಸಲಾಯಿತು.

ಸತತ ಮಳೆಗೆ ನಗರದ ಪ್ರಮುಖ ರಸ್ತೆಗಳು ಇನ್ನಷ್ಟು ಹಾಳಾಗಿದ್ದು, ಆಳುದ್ದದ ಗುಂಡಿಗಳು ಬಿದ್ದಿವೆ. ನಗರದ ಶಿವನಗರ ಸಮೀಪದ ಬೀದರ್–ನಾಂದೇಡ್ ಮುಖ್ಯರಸ್ತೆ ಚಹರೆಯೇ ಬದಲಾಗಿದೆ. ರಿಂಗ್ರೋಡ್ನಲ್ಲಿ ಹಲವೆಡೆ ಗುಂಡಿಗಳು ಬಿದ್ದಿವೆ.
.ಬೀದರ್ | ಉತ್ತಮ ಪರಿಸರಸ್ನೇಹಿ ಗಣಪನಿಗೆ ಬಹುಮಾನ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ .
ವಿದ್ಯಾಭಾರತಿ ಕರ್ನಾಟಕ ಸಂಘಟನೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಪ್ರಾಂತೀಯ ಅಥ್ಲೆಟಿಕ್ ಕ್ರೀಡಾಕೂಟ ಶನಿವಾರ ಮಧ್ಯಾಹ್ನ ಮಳೆಯಲ್ಲೇ ಆರಂಭಗೊಂಡಿತು. ರಾಜ್ಯದ 12 ಜಿಲ್ಲೆಗಳ 600ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಸುರಿವ ಮಳೆಯಲ್ಲೇ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.

ಜಿಲ್ಲೆಯ ಬೀದರ್, ಹುಲಸೂರ, ಬಸವಕಲ್ಯಾಣ, ಭಾಲ್ಕಿ, ಔರಾದ್, ಹುಮನಾಬಾದ್, ಚಿಟಗುಪ್ಪ, ಕಮಲನಗರ ಎಲ್ಲೆಡೆ ಮಳೆಯಾಗಿರುವುದು ವರದಿಯಾಗಿದೆ.
.ಬೀದರ್: ಪಿಂಚಣಿ ವಂಚಿತ ನೌಕರರ ಸಂಘದಿಂದ ಪ್ರತಿಭಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.