ಬೀದರ್: ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್ ಒಂದು ತಿಂಗಳಿಂದ ಹಿಡಿತ ಸಾಧಿಸಿ ಗರಿಷ್ಠ ಬೆಲೆಯ ಸ್ಥಾನದಲ್ಲಿ ಮುಂದುವರಿದಿದೆ. ಹಿರೇಕಾಯಿ ಹಿರಿತನ ಕಡಿಮೆಯಾಗಿ ತರಕಾರಿಗಳ ರಾಜ ಬದನೆಕಾಯಿಗೆ ಬೆಲೆ ಬಂದಿದೆ.

ಜಿಲ್ಲೆಯ ವಿವಿಧೆಡೆ ಮದುವೆ ಸಮಾರಂಭಗಳು ನಡೆದಿರುವ ಕಾರಣ ಬದನೆಕಾಯಿ ಹಾಗೂ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ಒಮ್ಮೆಲೇ ₹ 3 ಸಾವಿರ ಹೆಚ್ಚಳವಾಗಿದೆ. ಕರಿಬೇವು, ಬೆಂಡೆಕಾಯಿ ₹ 500 ಹಾಗೂ ಈರುಳ್ಳಿ ಬೆಲೆ ₹ 200 ಏರಿಕೆಯಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಬೀನ್ಸ್, ಹಸಿಮೆಣಸಿನಕಾಯಿ, ಆಲೂಗಡ್ಡೆ, ಬಿಟ್‌ರೂಟ್, ತೊಂಡೆಕಾಯಿ ಹಾಗೂ ಕೊತಂಬರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹಿರೇಕಾಯಿ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ, ಬೆಳ್ಳೂಳ್ಳಿ ಹಾಗೂ ಪಾಲಕ್ ₹ 1 ಸಾವಿರ, ಎಲೆಕೋಸು ₹ 500 ಕಡಿಮೆಯಾಗಿದೆ.

ಅತಿಯಾದ ಬಿಸಿಲು ಇರುವ ಕಾರಣ ಈ ವಾರ ಗಜ್ಜರಿ ಹಾಗೂ ಪ್ರಮುಖ ಸೊಪ್ಪು ಬೀದರ್ ಮಾರುಕಟ್ಟೆಗೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಿಂದ ನಿತ್ಯ ಹಸಿಮೆಣಸಿನಕಾಯಿ ಹಾಗೂ ಕೊತಂಬರಿ ಬರುತ್ತಿದೆ. ಹೈದರಾಬಾದ್ ಮಾರುಕಟ್ಟೆಯಿಂದ ಸ್ವಲ್ಪ ಪ್ರಮಾಣದಲ್ಲಿ ಹಸಿಮೆಣಸಿನಕಾಯಿ ಬರುತ್ತಿದ್ದರೂ ಗ್ರಾಹಕರು ಬೆಳಗಾವಿ ಹಸಿಮೆಣಸಿಕಾಯಿಯನ್ನು ಕೇಳಿ ಖರೀದಿಸುತ್ತಿದ್ದಾರೆ.

ತೆಲಂಗಾಣದ ಜಿಲ್ಲೆಗಳಿಂದ ಗಜ್ಜರಿ, ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ, ಬೆಂಡೆಕಾಯಿ ಮಾರುಕಟ್ಟೆಗೆ ಬಂದಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ ಆವಕವಾಗಿದೆ. ಬೀದರ್ ಜಿಲ್ಲೆಯಿಂದ ಹಿರೇಕಾಯಿ ಎಲೆಕೋಸು, ಹೂಕೋಸು, ಬದನೆಕಾಯಿ, ಕರಿಬೇವು, ಟೊಮೆಟೊ, ಪಾಲಕ್ ಬಂದಿವೆ.

‘ಜಿಲ್ಲೆಯಲ್ಲಿ ಬಿಸಿಗಾಳಿ ಬೀಸುತ್ತಿರುವ ಕಾರಣ ತರಕಾರಿ ಬೇಗ ಬಾಡುತ್ತಿದೆ. ಹೀಗಾಗಿ ಹೊರ ಜಿಲ್ಲೆಗಳಿಂದಲೂ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿದೆ. ಬೇಸಿಗೆಯ ಸುಡು ಬಿಸಿಲು ಹಾಗೂ ಸಾಗಣೆ ವೆಚ್ಚದಿಂದಾಗಿ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ಭಾರತ ವೆಜಿಟೆಬಲ್ ಶಾಪ್ ಮಾಲೀಕ ಅಹಮ್ಮದ್ ಪಾಶಾ ಹೇಳುತ್ತಾರೆ.

ಬೀದರ್ ತರಕಾರಿ ಸಗಟು ಮಾರುಕಟ್ಟೆ
ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಬೀನ್ಸ್ 10000-12000, 10000-12000
ಹಿರೇಕಾಯಿ 7000-8000, 5000-6000
ಈರುಳ್ಳಿ, 1200-1500, 1400-1600
ಮೆಣಸಿನಕಾಯಿ 5000-6000, 5000-6000
ಆಲೂಗಡ್ಡೆ 1200-1600, 1700-1800
ಎಲೆಕೋಸು 2000-3000, 2200-2500
ಬೆಳ್ಳೂಳ್ಳಿ 8000-9000, 7000-8000
ಬದನೆಕಾಯಿ 4000-5000, 7500-8000
ಮೆಂತೆ ಸೊಪ್ಪು 6000-7000, 9000-10000
ಹೂಕೋಸು 4000-5000, 5000-6000

ಬಿಟ್‌ರೂಟ್ 3000-4000, 3000-4000
ತೊಂಡೆಕಾಯಿ 3000-4000, 3000-4000
ಕರಿಬೇವು 2000-3000, 3000-3500
ಕೊತಂಬರಿ 5000-6000, 5000-6000
ಟೊಮೆಟೊ 4000-5000, 950-1000
ಪಾಲಕ್ 3000-4000, 2500-3000
ಬೆಂಡೆಕಾಯಿ 3000-3500, 3500-4000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.