ಬೀದರ್: ‘ಲಾಕ್ಡೌನ್ನಿಂದಾಗಿ ಮೊದಲೇ ಬೇಸರದಲ್ಲಿದ್ದೇವೆ. ಅದರಲ್ಲಿ ಐದು ದಿನಗಳಿಂದ ಬಿಎಸ್ಎನ್ಎಲ್ ಮೊಬೈಲ್ ಸೇವೆ ದೊರಕುತ್ತಿಲ್ಲ. ಸ್ಥಿರ ದೂರವಾಣಿ ಹಾಗೂ ಮೊಬೈಲ್ ಕರೆ ಆಗಾಗ ಕಡಿತಗೊಳ್ಳುತ್ತಿವೆ’ ಎಂದು ಬಿಎಸ್ಎನ್ಎಲ್ ಗ್ರಾಹಕರು ಬೇಸರದಿಂದ ಹೇಳುತ್ತಿದ್ದಾರೆ.

ವಿದ್ಯುತ್ ಅವಲಂಬಿತ ಟವರ್ಗಳ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಮುಂದುವರಿದಿದೆ. ವಿದ್ಯುತ್ ಕಡಿತಗೊಂಡ ತಕ್ಷಣ ಇಂಟರ್ನೆಟ್ ಸಹ ಕಡಿತಗೊಳ್ಳುತ್ತಿದೆ. ಮೊಬೈಲ್ಗಳಲ್ಲಿ ಸಿಗ್ನಲ್ ತೋರಿಸಿದರೂ ಕರೆಗಳು ಹೋಗುವುದೂ ಇಲ್ಲ, ಬರುವುದೂ ಇಲ್ಲ.

ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ಅವರಿಂದಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಅಧಿಕಾರಿಗಳ ಮೊಬೈಲ್ಗೆ ಸಂಪರ್ಕ ಸಹ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಜಾರಿ ಇರುವ ಕಾರಣ ಬಿಎಸ್ಎನ್ಎಲ್ ಕಚೇರಿಗೆ ಹೋಗಿ ದೂರು ಕೊಡುವ ಸ್ಥಿತಿಯಲ್ಲೂ ಇಲ್ಲ ಎನ್ನುವುದು ಗ್ರಾಹಕರ ಅಳಲು.

‘ಬಿಎಸ್ಎನ್ಎಲ್ ಸೇವೆಯನ್ನು ತೊರೆದು ಖಾಸಗಿ ಸಂಸ್ಥೆಗಳ ಮೊಬೈಲ್ ಸೇವೆಗೆ ಮೊರೆ ಹೋಗಲು ಆಲೋಚಿಸುತ್ತಿದ್ದೇವೆ. ಆದರೆ, ಲಾಕ್ಡೌನ್ನಿಂದಾಗಿ ಖಾಸಗಿ ಮೊಬೈಲ್ ಕಂಪನಿಗಳ ಕಚೇರಿಗಳು ಸಹ ಬಾಗಿಲು ಮುಚ್ಚಿವೆ. ಮನೆಗಳಲ್ಲಿ ಕುಳಿತು ಇಂಟರ್ನೆಟ್ನಲ್ಲಿ ಕಚೇರಿ ಕೆಲಸ ಮಾಡುವವರು ನೆಟ್ ಸಮಸ್ಯೆ ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ಬಹುಪಾಲು ಗ್ರಾಹಕರು.

ಮೊಬೈಲ್ನಲ್ಲಿ ಮಾತನಾಡುವ ಸಂದರ್ಭದಲ್ಲಿ ಸಂಪರ್ಕ ತನ್ನಿಂದತಾನೆ ಕಡಿತಗೊಳ್ಳುತ್ತಿದೆ. ಒಂದೊಮ್ಮೆ ಬೇರೆಯವರಿಗೆ ಕರೆ ಮಾಡಿದರೂ ರಿಂಗ್ ಟೋನ್ ಸಹ ಕೇಳಿಸದೆ ಸ್ತಬ್ಧವಾಗುತ್ತದೆ.

‘ಜಿಲ್ಲೆಯಲ್ಲಿ ಬಿಎಸ್ಎನ್ಎಲ್, ಏರ್ಟೆಲ್, ಜಿಯೊ, ಐಡಿಯಾ ಹಾಗೂ ವೋಡಾಫೋನ್ ಕಂಪನಿಗಳು ಸೇವಾ ನಿರತವಾಗಿವೆ. ಏರ್ಟೆಲ್ ಮತ್ತು ಜಿಯೊ ಕಂಪನಿಗಳು ವಿದ್ಯುತ್ ಕಡಿತಗೊಂಡರೂ ನಿರಂತರ ಸೇವೆ ನೀಡುತ್ತಿವೆ. ಆದರೆ ಬಿಎಸ್ಎನ್ಎಲ್ಗೆ ಸದ್ಯಕ್ಕೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಮೊಬೈಲ್ ರಿಚಾರ್ಜ್ ಅಂಗಡಿ ಮಾಲೀಕ ಶಿವಪುತ್ರ ಪಟಪಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.

‘ಸರ್ಕಾರಿ ಸ್ವಾಮ್ಯದಲ್ಲಿ ಇರುವ ಕಾರಣ ಮೋಸ ಹೋಗಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಿಂದ ಬಿಎಸ್ಎನ್ಎಲ್ ಸೇವೆ ಪಡೆದುಕೊಂಡಿದ್ದೆ. ಆದರೆ, ಮಿತಿಯ ಅವಧಿ ಇಂಟರ್ನೆಟ್ ಸಂಪರ್ಕವಿಲ್ಲದೆ ನಷ್ಟವಾಗುತ್ತಿದೆ. ಹೀಗಾಗಿ ಬಿಎಸ್ಎನ್ಎಲ್ ಸಂಪರ್ಕ ಕಡಿತಗೊಳಿಸಿದ್ದೇನೆ’ ಎನ್ನುತ್ತಾರೆ ಜ್ಞಾನದೀಪ ಕಸ್ತೂರೆ.

‘ಬೀದರ್ ಜಿಲ್ಲೆಯ ಬಿಎಸ್ಎನ್ಎಲ್ ಸಿಬ್ಬಂದಿ ಪಡೆಯುವ ವೇತನಕ್ಕಿಂತ ಮೂರು ಪಟ್ಟು ಆದಾಯ ಬರುತ್ತಿದೆ. ವಿದ್ಯುತ್ ಹೋದಾಗ ಕೆಲ ಟವರ್ಗಳಲ್ಲಿ ಜನರೇಟರ್ಗಳಿಗೆ ಸರಿಯಾಗಿ ಡೀಸೆಲ್ ಸಹ ಬಳಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಹಕರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಚೇರಿಗಳಲ್ಲಿ ಇಂಟರ್ನೆಟ್ ಸೌಲಭ್ಯಕ್ಕೆ ಲ್ಯಾಂಡ್ ಲೈನ್ ಅಗತ್ಯ. ಆದರೆ, ಅದು ಸಹ ಪದೇ ಪದೇ ಕೈಕೊಡುತ್ತಿದೆ. ಫೋನ್ಗಳಲ್ಲಿ ನಿರಂತರವಾಗಿ ಕರ್ಕಶ ಶಬ್ದ ಕೇಳಿ ಬರುತ್ತಿದೆ. ಕೆಲವೊಮ್ಮೆ ಶಬ್ದ ಸಹ ಸರಿಯಾಗಿ ಕೇಳಿ ಬರುವುದೂ ಇಲ್ಲ. ಇದೇ ಕಾರಣಕ್ಕೆ ಅನೇಕ ಗ್ರಾಹಕರು ಖಾಸಗಿ ಕಂಪನಿಗಳ ಸೇವೆಗೆ ಮೊರೆ ಹೋಗಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ತನ್ನ ಗ್ರಾಹಕರು ಬಿಎಸ್ಎನ್ಎಲ್ದಿಂದ ದೂರಾಗುತ್ತಿರುವುದನ್ನು ಕಣ್ಣಾರೆ ಕಂಡರೂ ಅಧಿಕಾರಿಗಳು ಮೌನವಾಗಿದ್ದಾರೆ. ಯಾವ ಕಂಪನಿಯ ಸೇವೆ ಪಡೆಯಬೇಕು ಎನ್ನುವುದು ಜನರ ಇಷ್ಟಕ್ಕೆ ಬಿಟ್ಟಿದ್ದು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.