ಬಸವಕಲ್ಯಾಣ: ‘ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಭಗವಾನ ಬುದ್ಧನ ತತ್ವ ಜಗತ್ತಿಗೆ ತಾರಕ ಮಂತ್ರವಾಗಿದೆ’ ಎಂದು ಅಕ್ಕಲಕೋಟೆಯ ಕನ್ನಡ ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.

ನಗರದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಸೋಮವಾರ ನಡೆದ ಬುದ್ಧ ಪೂರ್ಣಿಮೆ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬುದ್ಧ ಅರಮನೆ ತೊರೆದು, ಕಠಿಣ ತಪಸ್ಸು ಆಚರಿಸಿ ಜ್ಞಾನೋದಯ ಮಾಡಿಕೊಂಡು ತಾನು ಕಂಡುಕೊಂಡ ಶಾಶ್ವತ ಸತ್ಯವನ್ನು ಸಾರಿದರು. ಅವರು ಮಹಾ ದಾರ್ಶನಿಕ, ತತ್ವಜ್ಞಾನಿ ಆಗಿದ್ದರು’ ಎಂದರು.

‘ಬುದ್ಧ ದುಃಖಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಹೇಳುವ ನಾಲ್ಕು ಆರ್ಯ ಸತ್ಯಗಳು ಮಾನವನ ಆಂತರಿಕ ಅರಿವಿನ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತವೆ. ಪಂಚಶೀಲ ತತ್ವಗಳು ಮಾನವನ ಬಾಹ್ಯ ಪ್ರಜ್ಞೆಯ ನೀತಿ ಪ್ರಧಾನವಾದ ಬದುಕನ್ನು ಕಟ್ಟಿಕೊಡುತ್ತವೆ’ ಎಂದರು.

ಬೆಳಮಗಿಯ ಭಂತೆ ಅಮರಜ್ಯೋತಿ ಮಾತನಾಡಿ,‘ಬುದ್ಧ ಧಮ್ಮ ನಿಜವಾದ ಅರ್ಥದಲ್ಲಿ ಅದೊಂದು ಜೀವನ ಮಾರ್ಗ. ಪ್ರಮುಖವಾಗಿ ಆಧ್ಯಾತ್ಮಿಕ ಜೀವನ ಮಾರ್ಗವಾಗಿದೆ. ಅದಕ್ಕಾಗಿಯೇ ಅದನ್ನು ಧಮ್ಮ ಎಂದು ಕರೆಯುತ್ತಾರೆ. ಧಮ್ಮ ಎಂದರೆ ಪ್ರಕೃತಿಯ ನಿಯಮ, ಅದನ್ನು ಬುದ್ಧ ಮಾನವೀಯ ಪ್ರಜ್ಞೆಯೊಂದಿಗೆ 2500 ವರ್ಷಗಳ ಹಿಂದೆಯೇ ಸಾರಿದ್ದಾರೆ’ ಎಂದು ಹೇಳಿದರು.ನೇತೃತ್ವ ವಹಿಸಿದ್ದ ಬಸವಪ್ರಭು ಸ್ವಾಮೀಜಿ, ಬೆಂಗಳೂರಿನ ಲಿಂಗಾಯತ ಧರ್ಮ ಅಧ್ಯಯನ ಸಂಸ್ಥೆಯ ಕಾರ್ಯದರ್ಶಿ ಸಿದ್ಧಾರ್ಥ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿಲೀಪ ಶಿಂದೆ, ಗಿರಿಜಾ ಸಿದ್ಧಣ್ಣ, ಸುಭಾಷ ರಾಜೇಶ್ವರ, ಅಭಿಷೇಕ ಹಾಗೂ ಸಂಗಮೇಶ ತೊಗರಖೇಡೆ ಮಾತನಾಡಿದರು.

ನಿಜಲಿಂಗ ಸ್ವಾಮೀಜಿ, ಲಕ್ಷ್ಮಣ್ಣರಾವ ಮೇತ್ರೆ, ದಿಲೀಪರೆಡ್ಡಿ, ಸಂಜೀವಕುಮಾರ ಧನಶೆಟ್ಟಿ, ಶಾಂತಪ್ಪ ದುಬಲಗುಂಡಿ, ಸುಮಿತ್ರಾ ದಾವಣಗಾವೆ, ಸೋನಾಲಿ ಶಿವರಾಜ ನೀಲಕಂಠೆ, ಶ್ರೀದೇವಿ ಕಾಕನಾಳೆ, ಶ್ರೀದೇವಿ ಉಜಳಂಬೆ, ವಿಠಲ್ ಮೇತ್ರೆ, ಚಂದ್ರಪ್ಪ ಮಾಳಿ ಹಾಗೂ ಬಸವರಾಜ ಹೊನ್ನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.