ಔರಾದ್: ತಾಲ್ಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೀಮಾನಾಯಕ ತಾಂಡಾದಲ್ಲಿ ತೆರೆದ ಬಾವಿ ನಾಮಪತ್ತೆಯಾಗಿರುವ ಕುರಿತು ದೂರು ನೀಡಲಾಗಿದೆ.

ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಮುಖಂಡರು ಹಾಗೂ ತಾಂಡಾ ನಿವಾಸಿಗಳು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರದಿಂದ ತೋಡಿಸಲಾದ ಬಾವಿ ಎಲ್ಲಿದೆ ಎಂದು ಹುಡುಕಿಕೊಡಿ ಎಂದು ಆಗ್ರಹಿಸಿದ್ದಾರೆ.

ತಾಂಡಾದ ಸರ್ವೆ ನಂಬರ್ 62ರಲ್ಲಿ ಒಂದು ಸಲ ₹20 ಲಕ್ಷ, ಮತ್ತೊಂದು ಸಲ ₹10 ಖರ್ಚು ಮಾಡಿ ತೆರೆದ ಬಾವಿ ತೋಡಲಾಗಿದೆ. ಆದರೆ, ಈಗ ಆ ಸರ್ವೆ ನಂಬರ್ನಲ್ಲಿ ಬಾವಿಯೇ ಇಲ್ಲ ಎಂದು ದಲಿತ ವಿಮೋಚನೆ ಮಾನವ ಹಕ್ಕು ವೇದಿಕೆ ಜಿಲ್ಲಾ ಸಂಚಾಲಕ ಬಾಬುರಾವ ಕೌಠಾ ದೂರಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚಾದರೂ ತಾಂಡಾ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುತ್ತಿರುವುದು ಗಂಭೀರ ವಿಷಯ. ಈ ಕುರಿತು ಪರಿಶೀಲನೆ ನಡೆಸಿ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

2018-19ನೇ ಸಾಲಿನಲ್ಲಿ ತಾಂಡಾದ ನಿವಾಸಿಯೊಬ್ಬರು ಕುಡಿಯುವ ನೀರಿನ ಬಾವಿ ತೋಡಲು ಸರ್ವೇ ನಂಬರ್ 62ರಲ್ಲಿ 2 ಗುಂಟೆ ಜಮೀನು ಪಂಚಾಯಿತಿ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಆದರೆ, ಬಾವಿ ತೋಡಿದ್ದು ಅದೇ ವ್ಯಕ್ತಿಯ ಸರ್ವೆ ನಂಬರ್ 4ರಲ್ಲಿ. ಹೀಗಾಗಿ ಈಗ ಅದು ಸಮಸ್ಯೆಯಾಗಿದೆ. ಆ ವ್ಯಕ್ತಿ ಈಗ ನೀರು ಕೊಡಲು ತಯಾರಿಲ್ಲ. ಈ ಕಾರಣ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ಭೀಮಾನಾಯಕ ತಾಂಡಾದ ನಿವಾಸಿಯೂ ಆದ ಎಕಂಬಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಂಢರಿನಾಥ ರಾಠೋಡ್ ಹೇಳುತ್ತಾರೆ.

ಭೀಮಾನಾಯಕ ತಾಂಡಾದ ತೆರೆದ ಬಾವಿ ಕುರಿತು ದೂರು ಬಂದಿದೆ. ಇದು ನಾಲ್ಕೈದು ವರ್ಷ ಹಿಂದಿನ ಮಾತು. ಹೀಗಾಗಿ ತನಿಖೆ ನಡೆಸುತ್ತೇವೆ. ಸದ್ಯ ಬಾವಿ ಇರುವ ವ್ಯಕ್ತಿಯ ಮನವೊಲಿಸಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಠಾಕೂರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.