ಔರಾದ್ (ಬೀದರ್ ಜಿಲ್ಲೆ): ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಘಾಮಾ ತಾಂಡಾ ನಿವಾಸಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪಿಡಿಒ ಅವರ ಜತೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಘಾಮಾ ತಾಂಡಾದ ಮಹಿಳೆಯರು ಶನಿವಾರ ಖಾಲಿ ಕೊಡ ಹಿಡಿದುಕೊಂಡು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಕಚೇಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಪಿಡಿಒ ಶ್ವೇತಾ ಜತೆ ವಾಗ್ವಾದ ನಡೆಸಿ ಕೈಕೈ ಮಿಲಾಸುವ ಹಂತಕ್ಕೆ ತಲುಪಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

‘ಇಡೀ ಬೇಸಿಗೆಯಲ್ಲಿ ನಮ್ಮ ತಾಂಡಾ ಜನ ಕುಡಿಯಲು ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಿತ್ಯ 2-3 ಕಿ.ಮೀ. ನಡೆದುಕೊಂಡು ಹೋಗಿ ನೀರು ತರುತ್ತಿದ್ದರೂ ಪಂಚಾಯಿತಿಯವರು ನಮ್ಮ ಮೇಲೆ ಕನಿಕರ ತೋರುತ್ತಿಲ್ಲ. ಪ್ರತಿಭಟನೆ ಮಾಡಲು ಬಂದ ನಮ್ಮ ಮೇಲೆಯೇ ಪಿಡಿಒ ಅವರು ಬೆದರಿಕೆ ಹಾಕುತ್ತಿದ್ದಾರೆ’ ಘಾಮಾ ತಾಂಡಾ ಮಹಿಳೆಯರು ದೂರಿದರು.

ಘಾಮಾ ತಾಂಡಾಕ್ಕೆ ಬಾವಿಯಿಂದ ಪೈಪ್ಲೈನ್ ಮಾಡಿ ಕುಡಿಯಲು ನೀರು ಪೂರೈಸಿದ್ದೇವೆ. ಆದರೆ ತಾಂಡಾ ನಿವಾಸಿಗಳೇ ಪದೇ ಪದೇ ಆ ಪೈಪ್ ಒಡೆದು ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ನಿನ್ನೆ ಪಂಚಾಯಿತಿಗೆ ಬಂದಾಗ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಪೊಲೀಸರಿಗೂ ದೂರು ನೀಡಿದ್ದೇನೆ ಎಂದು ಪಿಡಿಒ ಶ್ವೇತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.