‘ಸರ್ವಾಧಿಕಾರಿಗಳ ಮೊದಲ ಟಾರ್ಗೆಟ್ ಬರಹಗಾರರು’
‘ಎಲ್ಲ ಸರ್ವಾಧಿಕಾರಿಗಳ ಮೊದಲ ಟಾರ್ಗೆಟ್ ಬರಹಗಾರರು ಚಿಂತಕರೇ ಆಗಿದ್ದಾರೆ. ಅರಿಸ್ಟಾಟಲ್ ಪ್ಲೇಟೋ ಗೆಲಿಲಿಯೋ ಸೇರಿದಂತೆ ಅನೇಕರ ನಿದರ್ಶನಗಳು ನಮ್ಮ ಕಣ್ಣಮುಂದಿವೆ’ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಹೇಳಿದರು. ಬಲಪಂಥೀಯರ ದೊಡ್ಡ ಟಾರ್ಗೆಟ್ ಕೂಡ ಸಾಹಿತಿಗಳಾಗಿದ್ದಾರೆ. ಸತ್ಯ ಹೇಳಲು ಪ್ರಯತ್ನಿಸುತ್ತಿರುವವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಕೆಲವರು ನಿಷ್ಠುರವಾಗಿ ಮಾತನಾಡುವವರು ಇರುವ ಕಾರಣ ಸಮಾಜ ಈಗಲೂ ಸ್ವಚ್ಛಂದವಾಗಿ ಉಸಿರಾಡುತ್ತಿದೆ ಎಂದರು. ಬಸವಣ್ಣ ಗಾಂಧೀಜಿ ಅಂಬೇಡ್ಕರ್ ಅವರ ಚಳವಳಿ ಸಾಮಾಜಿಕ ಸ್ಪಂದನೆ ಆಗಿತ್ತು. ಅವರ ಸಾಮಾಜಿಕ ಜವಾಬ್ದಾರಿಯಿಂದ ದೊಡ್ಡ ಬದಲಾವಣೆ ಕಾಣುವಂತಾಗಿದೆ. ಸಾಮಾಜಿಕ ಬದ್ಧತೆಗಾಗಿಯೇ ಗಾಂಧಿ ಜೀವ ಕಳೆದುಕೊಂಡರು. ಸಾಮಾಜಿಕ ಜವಾಬ್ದಾರಿ ಏನೆಂಬುದನ್ನು ಮರೆತು ಎಲ್ಲವೂ ರಾಜಕಾರಣಿಗಳು ಮಾಡಬೇಕೆಂದು ಬಯಸುವ ಮನೋಭಾವ ಬದಲಾಗಬೇಕು ಎಂದು ಹೇಳಿದರು.