ಖಂಡ್ರೆ ಸ್ವಂತ ಆಸಕ್ತಿಯಿಂದ ‘ಜನಸ್ಪಂದನ’
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಉಸ್ತುವಾರಿ ಮಂತ್ರಿಯಾದ ನಂತರ ಸ್ವಂತ ಆಸಕ್ತಿಯಿಂದ ವಿಶೇಷ ಮುತುವರ್ಜಿ ವಹಿಸಿ ಆಗಸ್ಟ್ 28ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಸಂಘಟಿಸಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ಬಳಿಕ ಮುಖ್ಯಮಂತ್ರಿಯವರು ರಾಜ್ಯದಾದ್ಯಂತ ‘ಜನತಾ ದರ್ಶನ’ ಆರಂಭಿಸಿದ್ದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ‘ಜನಸ್ಪಂದನ’ದ ಮಾದರಿಯೇ ‘ಜನತಾ ದರ್ಶನ’ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈಗ ‘ಜನಸ್ಪಂದನ’ವೂ ನಡೆಯುತ್ತಿಲ್ಲ ‘ಜನತಾ ದರ್ಶನ’ವೂ ಮಾಡುತ್ತಿಲ್ಲ. ಆದರೆ ಆಯಾ ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ‘ಜನತಾ ದರ್ಶನ’ಗಳು ನಡೆಯುತ್ತಿವೆ.