ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದ 24 ಗಂಟೆಯೊಳಗೆ ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಮಂಜುನಾಥ ಕೊರವಿ ಎಂಬುವರನ್ನು ವರ್ಗಾವಣೆ ಮಾಡಲಾಗಿದೆ.

ಮಂಜುನಾಥ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅ. 30ರಂದು ರಾಯಚೂರಿನ ಆರ್ಟಿಒ ಕಚೇರಿಗೆ ವರ್ಗಾವಣೆಗೊಳಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಡೆದದ್ದೇನು?:

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅ. 29ರ ರಾತ್ರಿ 10 ಗಂಟೆ ಸುಮಾರಿಗೆ ಭಾಲ್ಕಿ ರಸ್ತೆ ಮೂಲಕ ತೆರಳುತ್ತಿದ್ದರು. ನೌಬಾದ್–ಲಾಲ್ಬಾಗ್ ಸಮೀಪ ರಸ್ತೆಯ ಎರಡೂ ಬದಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಜನ ಕೂಡ ನಿಂತಿದ್ದರು. ಇದನ್ನು ಗಮನಿಸಿದ ಬೆಲ್ದಾಳೆ ಅವರು ಮಂಜುನಾಥ ಕೊರವಿ ಬಳಿ ತೆರಳಿ, ‘ರಾತ್ರಿ ಹೊತ್ತು ಇಷ್ಟೊಂದು ವಾಹನಗಳನ್ನೇಕೆ ತಡೆದು ನಿಲ್ಲಿಸಿದ್ದೀರಿ. ಮಹಿಳೆಯರು, ಮಕ್ಕಳು ರಸ್ತೆಬದಿ ನಿಂತಿದ್ದಾರೆ. ಬೇಗ ಪರಿಶೀಲಿಸಿ ಕಳಿಸಿಕೊಡಬೇಕು. ಹೆಲ್ಮೆಟ್ ಇದ್ದರೂ ಬೈಕ್ ಸವಾರರನ್ನೇಕೆ ತಡೆದಿದ್ದೀರಿ? ಜನರಿಗೆ ತೊಂದರೆ ಕೊಡಬೇಡಿ’ ಎಂದು ಹೇಳಿದ್ದಾರೆ.

ಇದರಿಂದ ಕೆರಳಿದ ಮಂಜುನಾಥ, ನಿಮ್ಮಂಥ ಲೀಡರ್ಗಳನ್ನು ಎಲ್ಲೆಡೆ ನೋಡಿದ್ದೇನೆ. ನೀವು ಮಂತ್ರಿ, ಎಂಎಲ್ಎ ಇರಬಹುದು. ನೀವು ಎಂಎಲ್ಎ ಅಂತ ನನಗೆ ಗೊತ್ತಿಲ್ಲ. ನಿಮ್ಮನ್ನು ಫಸ್ಟ್ ಟೈಮ್ ನೋಡ್ತಾ ಇದ್ದೀನಿ’ ಎಂದು ಶಾಸಕರು ಹಾಗೂ ಅವರ ಬೆಂಬಲಿಗರತ್ತ ಕೈಎತ್ತಿ ಚುಟುಕಿ ಹೊಡೆದು ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ.

ಇದರಿಂದ ಕೆರಳಿದ ಬೆಲ್ದಾಳೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ವಿಷಯ ತಿಳಿಸಿದ್ದಾರೆ. ಘಟನೆ ನಡೆದ ಮರುದಿನವೇ (ಅ.30) ಮಂಜುನಾಥ ಅವರನ್ನು ಎತ್ತಂಗಡಿಗೊಳಿಸಲಾಗಿದೆ.

ಜಿಲ್ಲೆಯ ಕಮಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ಸಾಗಣೆ ಲಾರಿಗಳಿಂದ ಹಫ್ತಾ ವಸೂಲಿ ಆರೋಪದಡಿ ಮಂಜುನಾಥ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.