ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬೀದರ್ ತಾಲ್ಲೂಕಿನ ಕಮಠಾಣ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಪರಿಶೀಲಿಸಿದರು
ಎಲ್ಲೆಲ್ಲಿ ಹಸಿ ಮಳೆಯಾಗಿದೆಯೋ ಅಂತಹ ಕಡೆ ರೈತರು ಬಿತ್ತನೆ ಕಾರ್ಯ ಆರಂಭಿಸಬಹುದು. ಸೋಯಾಬೀನ್ ತೊಗರಿ ಉದ್ದು ಹೆಸರು ಎಳ್ಳು ಬೆಳೆಯಬಹುದು.
–ಡಾ. ರತೇಂದ್ರನಾಥ ಸುಗೂರ ಜಂಟಿ ಕೃಷಿ ನಿರ್ದೇಶಕ ಬೀದರ್
ಕೋಹಿನೂರ್ ಸಾಯಗಾಂವ್‌ನಲ್ಲಿ ಹೆಚ್ಚು ಮಳೆ
ಬೀದರ್ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೆ ಉತ್ತಮ ವರ್ಷಧಾರೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2.9 ಸೆಂ.ಮೀ ಮಳೆ ದಾಖಲಾಗಿದೆ. ಅತಿ ಹೆಚ್ಚಿನ ಮಳೆ ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್ ಹೋಬಳಿಯಲ್ಲಿ ವರದಿಯಾಗಿದೆ. 18 ಸೆಂ.ಮೀ ಮಳೆಯಾಗಿದೆ. ಮಂಠಾಳನಲ್ಲಿ 7.4 ಸೆಂ.ಮೀ ಮುಡಬಿಯಲ್ಲಿ 7 ಸೆಂ.ಮೀ ಬಸವಕಲ್ಯಾಣದಲ್ಲಿ 6.9 ಸೆಂ.ಮೀ ಚಿಟಗುಪ್ಪದಲ್ಲಿ 6.6 ಸೆಂ.ಮೀ ಭಾಲ್ಕಿ ತಾಲ್ಲೂಕಿನ ಸಾಯಗಾಂವ್‌ನಲ್ಲಿ 8.8 ಸೆಂ.ಮೀ ಮಳೆ ದಾಖಲಾಗಿದೆ. ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿಯಲ್ಲಿ 5.2 ಸೆಂ.ಮೀ ಮಳೆ ಬಿದ್ದಿದೆ.