ಔರಾದ್: ತಾಲ್ಲೂಕಿನ ವಿವಿಧೆಡೆ ಮೊಹರಂ ಹಿಂದೂ-ಮುಸ್ಲಿಮರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ತಾಲ್ಲೂಕಿನ ಕೊಳ್ಳೂರ್, ಬೋರ್ಗಿ, ಮುಸ್ತಾಪುರ, ರಕ್ಷಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೊಹರಂ ಅಂಗವಾಗಿ ಐದು ದಿನ ಸಂಭ್ರಮವೋ ಸಂಭ್ರಮ. ಸೋಮವಾರ ಹಬ್ಬದ ಮೂರನೇ ದಿನವಾಗಿದ್ದು ಇಡೀ ರಾತ್ರಿ ಸಾಂಸ್ಕೃತಿಕ ನಡೆಯಿತು.

ಬೋರ್ಗಿ ಹಾಗೂ ಕೊಳ್ಳೂರ್ ಗ್ರಾಮದಲ್ಲಿ ಭಾನುವಾರ ರಾತ್ರಿ ಪೀರ್ ಮೆರವಣಿಗೆ ನಡೆಯಿತು. ಜನರು ಪೀರ್ಗೆ ಶಲ್ಯ ತೊಡಿಸಿ ಭಕ್ತಿ ಭಾವ ಮೆರೆದರು. ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು. ಕೋಲಾಟ ಮೊಹರಂ ಸಂಭ್ರಮ ಇಮ್ಮಡಿಗೊಳಿಸಿತು. ರಾಮದಾಸ, ಮುಕ್ತಾರ್, ವಿಜಯಕುಮಾರ, ಗಣಪತಿ, ಕೃಷ್ಣಪ್ಪ, ಫಯಾಜ್ ಸೇರಿದಂತೆ ಅನೇಕರು ಪೀರ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮುಸ್ತಾಪುರ: ಇಲ್ಲಿ ಏಕೈಕ ಮುಸ್ಲಿಂ ಮನೆ ಇದ್ದು ಹಿಂದುಗಳೇ ಮೊಹರಂ ಆಚರಣೆ ಮಾಡುತ್ತಾರೆ. ಭಾನುವಾರ ರಾತ್ರಿ ಲಾಲಸಾಬ್ ಪೀರ್ ಮೆರವಣಿಗೆ ನಡೆಯಿತು. ಸೋಮವಾರ ಮೌಲಾಲಿ ಪೀರ್ ಮೆರವಣಿಗೆ ನಡೆಯಿತು.

ತಾಲ್ಲೂಕಿನ ರಕ್ಷಳ ಗ್ರಾಮದಲ್ಲೂ ಹಿಂದುಗಳು ಮೊಹರಂ ಆಚರಣೆಯಲ್ಲಿ ಮುಂದೆ ಇರುತ್ತಾರೆ. ಅಲ್ಲಿ ಮೊಹರಂ ಕೊನೆಯ ದಿನ ಭವ್ಯ ಮೆರವಣಿಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.