ಭಾಲ್ಕಿ: ‘ಪ್ರಗತಿಪರ, ಸಶಕ್ತ ಸಮಾಜ ನಿರ್ಮಾಣದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಪಾತ್ರ ಹಿರಿದು’ ಎಂದು ರೋಟರಿ ಕಲ್ಯಾಣ ವಲಯ ಸಹಾಯಕ ಗವರ್ನರ್(ಎಜಿ) ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.

ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ನೂತನ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೌಢ್ಯತೆ, ಕಂದಾಚಾರ ಅಳಿಸಿ ವೈಜ್ಞಾನಿಕ ಮನೋಭಾವ ಬೆಳೆಸಿ, ಅನಕ್ಷರತೆ ಹೋಗಲಾಡಿಸಿ, ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಾಗಿದೆ. ಈ ದಿಸೆಯಲ್ಲಿ ರೋಟರಿ ಕ್ಲಬ್ನವರು ವಿಶ್ವದಾದ್ಯಂತ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಸಮಾಜದಲ್ಲಿನ ದುರ್ಬಲ, ಅಸಹಾಯಕ ವ್ಯಕ್ತಿಗಳನ್ನು ಗುರುತಿಸಿ, ನಿಸ್ವಾರ್ಥ ಭಾವನೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡುವುದು. ವಿಶ್ವದಲ್ಲಿ ಶಾಂತಿ ಕಾಪಾಡಿ ಸಕಾರಾತ್ಮಕ ವಾತಾವರಣ ಸೃಷ್ಟಿ ಮಾಡುವುದು ರೋಟರಿಯ ಮೂಲಧ್ಯೇಯವಾಗಿದೆ’ ಎಂದು ನುಡಿದರು.

ನೃಪತುಂಗ ವಲಯ, ಪ್ರಮುಖ ಜಹೀರ್ ಅನ್ವರ್ ಮುಲ್ತಾನಿ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ, ಡಾ.ಅಮೀತ ಅಷ್ಟೂರೆ ಮಾತನಾಡಿದರು.

ಇನ್ಸ್ಟಾಲೇಷನ್ ಅಧಿಕಾರಿ ಡಾ.ವಸಂತ ಪವಾರ್ ರೋಟರಿ ಮಾಜಿ ಅಧ್ಯಕ್ಷ ವಿಲಾಸ ಕನಸೆ, ಕಾರ್ಯದರ್ಶಿ ಸಾಗರ ನಾಯಕ, ಖಜಾಂಚಿ ಶಶಿಕಾಂತ ಭೂರೆ ಅವರಿಂದ ನೂತನ ರೋಟರಿ ಅಧ್ಯಕ್ಷ ಸಂಜೀವಕುಮಾರ ಪಂಡರಗೆರೆ, ಕಾರ್ಯದರ್ಶಿ ದತ್ತುಕುಮಾರ ಮೆಹಕ್ರೆ, ಖಜಾಂಚಿ ಸಜ್ಜಲ್ ಬಳತೆ ಅವರಿಗೆ ಗೌಪ್ಯತೆ ಪ್ರಮಾಣ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.

ರೋಟರಿ ಸದಸ್ಯರಾದ ಯುವರಾಜ ಜಾಧವ, ಅಶ್ವಿನ ಭೋಸ್ಲೆ, ನಿತಿನ ಪಾಟೀಲ, ಶರದ ತುಕದೆ, ಬಸವಾ ಪಾಟೀಲ, ಸೌರಭ ನಾಯಕ, ಅಮರ ಜಲ್ದೆ, ವಿಕ್ರಮ ದೇವಪ್ಪ, ಶಾಂತನು ಕುಲಕರ್ಣಿ, ಶಾಂತವೀರ ಸಿರ್ಗಾಪೂರೆ, ಮಾಂಜ್ರಾ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಎಮ್ಮೆ, ಕಾರ್ಯದರ್ಶಿ ಜಗದೀಶ ಖಂಡ್ರೆ, ಪ್ರಮುಖರಾದ ಕಲ್ಲಪ್ಪ ಪಂಡರಗೆರೆ, ಅನಿಲ ಸುಕಾಲೆ, ಉಮಾಕಾಂತ ವಾರದ ಸೋಮನಾಥ ಮುದ್ದಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.