ಔರಾದ್: ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಲಾಧಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸ್ತಾಪುರದಲ್ಲಿ 250 ಮನೆಗಳ ಪೈಕಿ ಮುಸ್ಲಿಂ ಸಮುದಾಯದ ಒಂದೇ ಕುಟುಂಬ ಇದೆ. ಈ ಕುಟುಂಬದ ಇಬ್ಬರು ಸಹೋದರರ ಪೈಕಿ ಶೇಖ್ ಸಲೀಮ್ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. ಊರಿನಲ್ಲೇ ಇರುವ ಇನ್ನೊಬ್ಬ ಸಹೋದರ ಶೇಖ್ ಚಂದಪಾಶಾ ಹಿಂದೂಗಳ ಸಹಕಾರದಿಂದ ಅವರು ಐದು ದಿನಗಳ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

‘ನಾವು ಹೈದರಾಬಾದ್‌ನಲ್ಲಿ ನೆಲೆಸಿದ್ದರೂ ಪ್ರತಿ ವರ್ಷ ಮೊಹರಂ ಸಮಯದಲ್ಲಿ ಊರಿಗೆ ಬರುತ್ತೇವೆ. ಊರಿನ ಎಲ್ಲ ಸಮುದಾಯವರು ಕೂಡಿ ಮೊಹರಂ ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ನಮ್ಮ ಊರಲ್ಲಿ ಎರಡು ಪೀರ್ ಕೂಡಿಸುತ್ತೇವೆ. ಒಂದನ್ನು (ಮೌಲಾಲಿ ಪೀರ್) ಹಿಂದೂ ಸಹೋದರ ರಾಮಣ್ಣ ಸಗರ್ ಅವರೇ ಹಿಡಿದು ಮೆರವಣಿಗೆ ತೆಗೆಯುತ್ತಾರೆ. ಇನ್ನೊಂದು ಪೀರ್ (ಲಾಲ್‌ಸಾಬ್) ನಮ್ಮ ಸಹೋದರ ಶೇಖ್ ಖಾಜಾಪಾಶ ಮುನ್ನಡೆಸುತ್ತಾರೆ ಎಂದು ಶೇಖ್ ಸಲೀಮ್ ತಿಳಿಸಿದರು.

‘ಬೇರೆ ಊರುಗಳಲ್ಲಿ ನೆಲೆಸಿದವರೂಮೊಹರಂ ಆಚರಣೆಗೆ ಊರಿಗೆ ಬರುತ್ತಾರೆ. ದಸರಾ, ದೀಪಾವಳಿಯಂತೆ ಮೊಹರಂ ನಮ್ಮದೇ ಹಬ್ಬ ಎಂದು ನಾವು ಆಚರಿಸುತ್ತೇವೆ’ ಎಂದು ಮುಸ್ತಾಪುರ ಗ್ರಾಮದವರಾದ ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಹೇಳುತ್ತಾರೆ.

ಐದು ದಿನದ ಹಬ್ಬದ ಪೈಕಿ ಮೂರನೇ ದಿನ ರಾತ್ರಿ ಮೌಲಾಲಿ ಪೀರ್ ಮೆರವಣಿಗೆ ನಡೆಯುತ್ತಿದೆ. ನಾಲ್ಕನೇ ದಿನ ಲಾಲ್‌ಸಾಬ್ ಹಾಗೂ ಕೊನೆಯ ದಿನ ಎರಡೂ ಪೀರ್ ಮೆರವಣಿಗೆ ಅದ್ದೂರಿಯಿಂದ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.