ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಶುಕ್ರವಾರ ಮೃತಪಟ್ಟಿದೆ.

ಮದ್ದೂರು ಕಾಲೊನಿಯ ಅರಣ್ಯ ಡಿ ಲೈನ್ ಹತ್ತಿರ ರೈತ ದೊಡ್ಡ ಕರಿಯಯ್ಯ ಎಂಬುವವರ ಜಮೀನಿನ ಬಳಿ ತೀವ್ರ ನಿತ್ರಾಣದಿಂದ ಮಲಗಿದ್ದ ಹುಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು.

ವಿಷಯ ತಿಳಿದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಪಶು ವೈದ್ಯ ಡಾ.ಮಿರ್ಜಾ ವಾಸೀಂ, ಆರ್‌ಎಫ್‌ಒ ಮಲ್ಲೇಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗಂಡು ಹುಲಿಯು ನಿಶ್ಯಕ್ತಿಯಿಂದ ನಿಲ್ಲಲಾರದ ಸ್ಥಿತಿಯಲ್ಲಿತ್ತು.

ಅತಿಯಾದ ಬಳಲಿಕೆಯಿಂದ ಸಂಜೆ 4 ಗಂಟೆಗೆ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಗಂಡು ಹುಲಿಗೆ ಮೂರು ವರ್ಷ ವಯಸ್ಸಾಗಿರಬಹುದು. ದೇಹದ ಮೇಲೆ ಗಾಯದ ಗುರುತುಗಳಿದ್ದು, ವನ್ಯಪ್ರಾಣಿಗಳೊಂದಿಗಿನ ಕಾದಾಟದಲ್ಲಿ ಗಾಯಗೊಂಡಿದೆ’ ಎಂದು ಎಸಿಎಫ್ ರವೀಂದ್ರ ಹೇಳಿದ್ದಾರೆ.
.ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.