ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶುಕ್ರವಾರ ವಾಹನಗಳು ಡಿಕ್ಕಿಯಾಗಿ ಎರಡು ಜಿಂಕೆಗಳು ಮೃತಪಟ್ಟಿವೆ.

ಪುಣಜನೂರು ವನ್ಯಜೀವಿ ವಲಯದ ಕಾರೇಪಾಳ್ಯ ಗಸ್ತಿನ ಮೂಲೆಹೊಳೆ ಅರಣ್ಯದಲ್ಲಿ ಹಾಗೂ ಕಾರೇಪಾಳ್ಯ ಗಸ್ತಿನ ಗುಂಡುಹುಣಸೆ ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 948 ಅಪಘಾತದಲ್ಲಿ ಜಿಂಕೆಗಳು ಸಾವನ್ನಪ್ಪಿವೆ.

ಘಟನೆ ಸಂಬಂಧ ಬೆಂಗಳೂರು ಮೂಲದ ಎನ್.ವಿ.ಸುಹಾಸ್ ಹಾಗೂ ಮಂಡ್ಯದ ಕಬ್ಬನಹಳ್ಳಿ ಗ್ರಾಮದ ರಾಚಪ್ಪಾಜಿ ವಿರುದ್ಧ ಚಾಮರಾಜನಗರ ವನ್ಯಜೀವಿ ಉಪವಿಭಾಗದಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ವೇಗವಾಗಿ ಕಾರನ್ನು ಚಲಾಯಿಸಿ ಜಿಂಕೆಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.