ಚಾಮರಾಜನಗರ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ.

ಗ್ರಾಮದ ಬಸವರಾಜಪ್ಪ ಎಂಬುವವರಿಗೆ ಸೇರಿದ ಸ್ಕೂಟರ್ ಇದಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಸವರಾಜಪ್ಪ ಅವರು ಬ್ಯಾಟರಿ ಚಾರ್ಜ್ ಮಾಡಿ ಸ್ಕೂಟರ್ ಗೆ ಅಳವಡಿಸಿದ್ದರು. ಮನೆಯಿಂದ ಹೊರಡುವುದಕ್ಕಾಗಿ ಸ್ಕೂಟರ್ ಚಾಲೂ ಮಾಡಿದಾಗ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿತು. ತಕ್ಷಣ ಅವರು ದೂರ ಹೋದರು. ಕ್ಷಣಾರ್ಧದಲ್ಲಿ ಬೆಂಕಿ ಹೆಚ್ಚಾಯಿತು. ಬ್ಯಾಟರಿ ಸ್ಫೋಟಗೊಂಡು ಧಗ ಧಗನೆ ಉರಿಯಿತು.

ಪಕ್ಕದಲ್ಲೇ ಬೈಕ್ ಹಾಗೂ ಮನೆ ಇತ್ತು. ಅದೃಷ್ಟವಶಾತ್ ಬೆಂಕಿ ವ್ಯಾಪಿಸದಿರುವುದರಿಂದ ಹಾನಿ ಸಂಭವಿಸಿಲ್ಲ. ಸ್ಥಳೀಯ ಯುವಕರು ಸ್ಕೂಟರ್ ಗೆ ನೀರು ಎರಚಿ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.