ಗುಂಡ್ಲುಪೇಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹಿಮವದ್ಗೋಪಾಲಸ್ವಾಮಿ ಬೆಟ್ಟದ ಗೋಪಾಲಸ್ವಾಮಿ ದೇವಾಲಯದಲ್ಲಿ ಏ.1ರಿಂದ ಏ.7ರವರೆಗೆ ವಿವಿಧ ಉತ್ಸವಗಳು ನಡೆಯಲಿದ್ದು, 4ರಂದು ಬ್ರಹ್ಮ ರಥೋತ್ಸವ ನಡೆಯಲಿದೆ.

ಉತ್ಸವಗಳ ವಿವರ: ಏ.1ರಂದು ಸ್ವಾಮಿಗೆ ಫಲ ಪಂಚಾಮೃತಾಭಿಷೇಕ ನಡೆಯಲಿದೆ. ಆದಿವಾಸರ, ಅಂಕುರಾರ್ಪಣ ಗರುಡ ಪ್ರತಿಷ್ಠಾ ರಕ್ಷಬಂಧನ ನಡೆಯಲಿದೆ.

2ರಂದು ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಭೇರಿತಾಡನ ಯಾಗಶಾಲಾ ಪ್ರವೇಶ, 3ರಂದು ಸ್ವಾಮಿಯ ಉತ್ಸವ, ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ, ರುಕ್ಮಿಣಿ ಸತ್ಯಭಾವ ಸಹಿತ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆಯಲಿದೆ.

4ರಂದು ಬೆಳಿಗ್ಗೆ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ.

5ರಂದು ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ, ಡೋಲೋತ್ಸವ, ಶಯನೋತ್ಸವ, 6ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಉತ್ಸವ, ಫಣಿಮಾಲಾ ಪ್ರಬಂಧ ಸೇವೆ, ಪೂರ್ಣಾಹುತಿ ನಡೆಯಲಿದೆ.

ಕೊನೆಯ ದಿನವಾದ ಏ.7ರಂದು ಮಹಾಭಿಷೇಕ, ಮಹಾ ಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ, ಧ್ವಜಾವರೋಹಣ, ಉಧ್ವಾಸನ ಪ್ರಬಂಧ ಸೇವೆ, ಸೇತು ಸೇವೆ, ಮೂಕಬಲಿ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.