ಚಾಮರಾಜನಗರ: 2019–20ನೇ ಸಾಲಿನ ಒಂಬತ್ತು ತಿಂಗಳಲ್ಲಿ (ಏಪ್ರಿಲ್ನಿಂದ ಡಿಸೆಂಬರ್ವರೆಗೆ) ಅಬಕಾರಿ ಇಲಾಖೆಯು ಮದ್ಯ ಮಾರಾಟದಲ್ಲಿ ಗುರಿ ಮೀರಿದ ಸಾಧನೆ ಮಾಡಿದೆ. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ (ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ) ಗುರಿಗಿಂತಲೇ ಶೇ 1ರಷ್ಟು ಹೆಚ್ಚು (ಶೇ 101) ಮದ್ಯ ಮಾರಾಟ ಮಾಡಿದೆ.

ಅತಿ ಹೆಚ್ಚು ಮಾರಾಟ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆಗಿದ್ದು, ಶೇ 106.73ರಷ್ಟು ಸಾಧನೆ ಮಾಡಿದೆ. ಉಳಿದಂತೆ ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಿಗದಿತ ಗುರಿಗೆ ಹೋಲಿಸಿದರೆ ಕ್ರಮವಾಗಿ ಶೇ 97.66 ಮತ್ತು ಶೇ 98.16ರಷ್ಟು ಮದ್ಯ ಮಾರಾಟವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿರುವ ಮದ್ಯ ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷ ಶೇ 7.59ರಷ್ಟು ಹೆಚ್ಚು ಮಾರಾಟವಾಗಿದೆ.

2018ರ ಏಪ್ರಿಲ್ 1ರಿಂದ ಡಿಸೆಂಬರ್ 31ರ ವರೆಗೆ 4,27,813 ಪೆಟ್ಟಿಗೆಗಳನ್ನು (ಕೇಸ್) (ಒಂದು ಪೆಟ್ಟಿಗೆ ಎಂದರೆ 8,640 ಲೀಟರ್) ಮಾರಾಟ ಮಾಡುವ ಗುರಿಯನ್ನು ಇಲಾಖೆ ಹೊಂದಿತ್ತು. 3,59,910 ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿತ್ತು. ಈ ವರ್ಷ 4,21,785 ಪೆಟ್ಟಿಗೆಗಳಷ್ಟು ಮಾರಾಟದ ಗುರಿ ಹೊಂದಲಾಗಿತ್ತು. ಇದುವರೆಗೂ 4,25,986 ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿಗೆ 1,38,565 ಪೆಟ್ಟಿಗೆ ಮದ್ಯ ಮಾರಾಟದ ಗುರಿ ನಿಗದಿಪಡಿಸಲಾಗಿತ್ತು. ಅಲ್ಲಿ 1,47,891 ಪೆಟ್ಟಿಗೆಗಳಷ್ಟು ಮದ್ಯ ಬಿಕರಿಯಾಗಿದೆ.

2018–19ಕ್ಕೆ ಹೋಲಿಸಿದರೆ 2019–20ರಲ್ಲಿ ಜಿಲ್ಲೆಗೆ ನೀಡಲಾಗಿದ್ದ ಗುರಿ ಕಡಿಮೆಯಾಗಿದೆ. ‘ಬಜೆಟ್ನಲ್ಲಿ ಘೋಷಿಸಲಾದ ಗುರಿಗೆ ಅನುಸಾರವಾಗಿ ಜಿಲ್ಲಾವಾರು ಗುರಿಗಳನ್ನು ನಿಗದಿಪಡಿಸಲಾಗುತ್ತದೆ’ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಉಪ ಆಯುಕ್ತ ಮಾದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಯರ್ಗೆ ಬೇಡಿಕೆ ಕಡಿಮೆ

ಗುಂಡ್ಲುಪೇಟೆ ಬಿಟ್ಟು, ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಈ ವರ್ಷ ಬಿಯರ್ ಮಾರಾಟ ಕುಂಠಿತವಾಗಿದೆ.

2018–19ನೇ ಸಾಲಿನ ಮೊದಲ 9 ತಿಂಗಳಲ್ಲಿ 57,890 ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ 57,653 ಪೆಟ್ಟಿಗೆಗಳು ಮಾರಾಟವಾಗಿದೆ. ಕೊಳ್ಳೇಗಾಲದಲ್ಲಿ ಕಳೆದ ವರ್ಷ 65,925 ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ 61,395 ಪೆಟ್ಟಿಗೆಗಳು ಮಾರಾಟವಾಗಿದೆ.

ಗುಂಡ್ಲುಪೇಟೆಯಲ್ಲಿ ಈ ವರ್ಷ 36,641 ಪೆಟ್ಟಿಗೆಗಳಷ್ಟು ಬಿಯರ್ ಅನ್ನು ಗ್ರಾಹಕರು ಖರೀದಿಸಿದ್ದಾರೆ. ಕಳೆದ ವರ್ಷ ಇದು 29,792 ಇತ್ತು.

ಪ್ರವಾಸಿ ತಾಣಗಳು, ರೆಸಾರ್ಟ್ಗಳು ಹೆಚ್ಚಾಗಿರುವ ಹಾಗೂ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಂತೆ ತಾಲ್ಲೂಕು ಇರುವುದರಿಂದ ಇಲ್ಲಿ ಸಂಚರಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಹಾಗಾಗಿ, ಮದ್ಯ ಹಾಗೂ ಬಿಯರ್ ಮಾರಾಟವು ಅಲ್ಲಿ ಗುರಿಯನ್ನೂ ಮೀರಿದೆ ಎಂದು ಹೇಳಲಾಗುತ್ತಿದೆ.

ದುಬಾರಿ ಕಾರಣ?: ‘ಈ ವರ್ಷ ಬಿಯರ್ ಬೆಲೆ ಜಾಸ್ತಿಯಾಗಿದೆ. ಈ ಕಾರಣಕ್ಕೆ ಜನರು ಬಿಯರ್ ಖರೀದಿ ಕಡಿಮೆ ಮಾಡಿರುವ ಸಾಧ್ಯತೆ ಇದೆ. ಇದರ ಜೊತೆಗೆ ಬಿಸಿ ವಾತಾವರಣದಲ್ಲಿ ಬಿಯರ್ಗೆ ಹೆಚ್ಚು ಬೇಡಿಕೆ ಇರುತ್ತದೆ. ಜಿಲ್ಲೆಯಲ್ಲಿ ಈ ವರ್ಷ ಮಳೆ ಹೆಚ್ಚಾಗಿ, ಶೀತ ಹವೆ ಇದ್ದುದರಿಂದ ಬಿಯರ್ ಮಾರಾಟದ ಮೇಲೆ ಪರಿಣಾಮ ಬಿದ್ದಂತೆ ಕಾಣುತ್ತದೆ’ ಎಂದು ಮಾದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ವರ್ಷದಲ್ಲಿಲ್ಲ ‘ಕಿಕ್’

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಔತಣಕೂಟಗಳು ಹೆಚ್ಚಾಗಿರುವುದರಿಂದ ಮದ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ಜಿಲ್ಲೆಯಲ್ಲಿ ಅಂತಹ ಬೇಡಿಕೆ ಬಂದಿಲ್ಲ.

‘ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಬೇಡಿಕೆ ಹೆಚ್ಚಿರುತ್ತವೆ. ನಮ್ಮ ಜಿಲ್ಲೆಯಲ್ಲಿ ಅಂತಹ ವಾತಾವರಣ ಇಲ್ಲ. ಹಾಗಾಗಿ, ಡಿಸೆಂಬರ್ 31 ಮತ್ತು ಜನವರಿ 1ರಂದು ಮಾರಾಟ ಎಂದಿನಂತೆ ಇತ್ತು’ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಉಪ ಆಯುಕ್ತ ಮಾದೇಶ್ ತಿಳಿಸಿದರು.

ಅಬಕಾರಿ ಇಲಾಖೆಯ ಅಂಕಿ ಅಂಶದ ಪ್ರಕಾರ, ಡಿಸೆಂಬರ್ನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಾತ್ರ ಗುರಿಯನ್ನೂ ಮೀರಿ ಮದ್ಯ ಮಾರಾಟವಾಗಿದೆ. 14,042 ಪೆಟ್ಟಿಗೆಗಳ ಗುರಿಗೆ ಪ್ರತಿಯಾಗಿ 16,644 ಪೆಟ್ಟಿಗೆ ಮದ್ಯ ಮಾರಾಟವಾಗಿದೆ.

ಡಿಸೆಂಬರ್ನಲ್ಲಿ ಬಿಯರ್ಗೂ ಬೇಡಿಕೆ ಕಡಿಮೆ ಇತ್ತು. 2018ರ ಡಿಸೆಂಬರ್ನಲ್ಲಿ 18,223 ಪೆಟ್ಟಿಗೆ ಬಿಯರ್ ಬಿಕರಿಯಾಗಿದ್ದರೆ, 2019ರಲ್ಲಿ 17,512 ಪೆಟ್ಟಿಗೆ ಮಾರಾಟವಾಗಿದೆ.

ಗುಂಡ್ಲುಪೇಟೆಯಲ್ಲಿ ಮಾತ್ರ ಹೆಚ್ಚು ಬೇಡಿಕೆ ಇತ್ತು. 2018ರ ಡಿಸೆಂಬರ್ಗೆ (3,816) ಹೋಲಿಸಿದರೆ ಕಳೆದ ತಿಂಗಳು 376 ಪೆಟ್ಟಿಗೆ ಹೆಚ್ಚು (4192) ಬಿಯರ್ ಮಾರಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.