ಇನ್ನೂ ಕಟಾವಿಗೆ ಬಾರದ ಬೆಳೆ ಈ ಬಾರಿ ಇಳುವರಿಯೂ ಕಡಿಮೆ ಹೊರಗಿಂದಲೂ ಬಂದಿಲ್ಲ ಮಾವು
‘ಮುಂಗಡ ಯಾರೂ ಕೊಟ್ಟಿಲ್ಲ’
ಮಾವು ಖರೀದಿಗಾಗಿ ಮುಂಗಡ ನೀಡುವ ಸಗಟು ವ್ಯಾಪಾರಿಗಳು ಈ ಬಾರಿ ತೋಟದತ್ತ ತಿರುಗಿಯೂ ನೋಡಿಲ್ಲ. ನಿರೀಕ್ಷಿತ ಬೆಳೆ ಇಲ್ಲದಿರುವುದು ಹಾಗೂ ಗುಣಮಟ್ಟದ ಕಾಯಿ ಸಿಗದಿರುವುದು ಇದಕ್ಕೆ ಕಾರಣ. ‘ಸಂಕರ ತಳಿಗಳ ಮಾವಿನ ವೃಕ್ಷಗಳಲ್ಲೂ ಹೇಳಿಕೊಳ್ಳುವ ಫಲ ಕಾಣಿಸುತ್ತಿಲ್ಲ. ಶೇ 40ರಷ್ಟು ಇಳುವರಿ ಸಿಗುವ ನಿರೀಕ್ಷೆ ಇದೆ. ಆದರೆ ಮರಗಳಲ್ಲಿ ಇನ್ನೂ ಹೂ ಗೊಂಚಲು ಇದೆ. ಎರಡು ಬಾರಿ ಹೂ ಮಿಡಿಗಾಯಿ ಕಚ್ಚಿದೆ. ಆದರೆ ಫಸಲಿನ ಭರವಸೆ ಇಲ್ಲ’ ಎಂದು ಬೆಳೆಗಾರ ಅಂಬಳೆ ಶಿವಶಂಕರಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರತಿ ವರ್ಷ ಜನವರಿ ವೇಳೆಗೆ ಮುಂಗಡ ಕೈಸೇರುತ್ತಿತ್ತು. ಜೂನ್ ತನಕ ಕಟಾವು ಮಾಡಲು ಅನುಮತಿ ನೀಡಲಾಗುತ್ತಿತ್ತು. ಈ ವರ್ಷ ಮರಗಳು ಭಣಗುಟ್ಟುತ್ತಿದ್ದು ಯಾರು ಮುಂಗಡ ನೀಡಲು ಮುಂದೆ ಬಂದಿಲ್ಲ’ ಎಂದು ಅವರು ಹೇಳಿದರು.