ಕೊಳ್ಳೇಗಾಲ: ತಾಲ್ಲೂಕಿನ ಚಿಲುಕವಾಡಿಯ ಶಂಭುಲಿಂಗನ ಬೆಟ್ಟದ ಕುಮಾರ ನಿಜಗುಣ ಸ್ವಾಮೀಜಿ (88) ಅವರು ಮಂಗಳವಾರ ಮುಂಜಾನೆ ನಿಧನರಾದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋ ಸಹಜ ಕಾರಣದಿಂದ ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು.

ಅಂತ್ಯಕ್ರಿಯೆ ಸಂಜೆ ಚಿಲುಕವಾಡಿ ಗ್ರಾಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನೇರವೇರಲಿದೆ ಎಂದು ಗೊತ್ತಾಗಿದೆ.

1933ರ ಜೂನ್ 15ರಂದು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಗೃಹಸ್ಥರಾಗಿದ್ದರು. 1981 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅವರು, ಛಂದಸ್ಸಿನ ವಿಷಯದಲ್ಲಿ ಆಳ ಅಧ್ಯಯನ ಮಾಡಿದ್ದರು. ಹಲವು ಛಂದೋ ಆವಿಷ್ಕಾರಗಳನ್ನು ಮಾಡಿದ್ದರು. ಕನ್ನಡ ಮೇರು ಸಾಹಿತಿಗಳೊಂದಿಗೆ ಒಡನಾಟವನ್ನೂ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.