ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಇದ್ದೂ ಇಲ್ಲದಂತಾದ ಸಮುದಾಯ ಶೌಚಾಲಯ

‘ಬಯಲು ಬಹಿರ್ದೆಸೆ ಮುಕ್ತ ಚಾಮರಾಜನಗರ ಜಿಲ್ಲೆ’ ಕಡತಗಳಲ್ಲಿ ಮಾತ್ರ ಅನುಷ್ಠಾನ
Published : 22 ಜುಲೈ 2024, 7:28 IST
Last Updated : 22 ಜುಲೈ 2024, 7:28 IST
ಫಾಲೋ ಮಾಡಿ
Comments
ಚಾಮರಾಜನಗರದ ಉಪ್ಪಾರಕೇರಿಯಲ್ಲಿ ಬಾಗಿಲು ಮುಚ್ಚಿರುವ ಸಮುದಾಯ ಶೌಚಾಲಯ
ಚಾಮರಾಜನಗರದ ಉಪ್ಪಾರಕೇರಿಯಲ್ಲಿ ಬಾಗಿಲು ಮುಚ್ಚಿರುವ ಸಮುದಾಯ ಶೌಚಾಲಯ
‘ದೂರದೃಷ್ಟಿ ಇಲ್ಲದ ಅಧಿಕಾರಿಗಳು’
ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಜಿಲ್ಲೆಗೆ ಮಂಜೂರಾದ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯ ಇರುವ ಕಡೆ ಹಾಗೂ ಅಗತ್ಯ ಇಲ್ಲದ ಕಡೆಗಳಲ್ಲೆಲ್ಲ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಜನಪ್ರತಿನಿಧಿಗಳ ಒತ್ತಡದಿಂದ ಈಗಾಗಲೇ ಶೌಚಾಲಯ ಇರುವ ಕಡೆಗಳಲ್ಲೂ ಸಮುದಾಯ ಶೌಚಾಲಯ ನಿರ್ಮಿಸಿಕೊಳ್ಳಲಾಗಿದೆ. ಜನದಟ್ಟಣೆ ಇಲ್ಲದ ಜನವಸತಿ ಇಲ್ಲದ ಕಡೆಗಳಲ್ಲೂ ಶೌಚಾಲಯಗಳು ಇರುವುದನ್ನು ನೋಡಿದರೆ ದೂರದೃಷ್ಟಿ ಹಾಗೂ ಸ್ಪಷ್ಟನೆ ಇಲ್ಲದಿರುವುದು ಎದ್ದು ಕಾಣುತ್ತದೆ ಎನ್ನುತ್ತಾರೆ ಸಾರ್ವಜನಿಕರು. ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದ ಮೇಲೆ ನೀರಿನ ಪೂರೈಕೆ ವಿದ್ಯುತ್ ಸಂಪರ್ಕ ಹಾಗೂ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾಮಾನ್ಯ ಅರಿವು. ಆದರೆ ನಗರದಲ್ಲಿ ಶೌಚಾಲಯ ಕಟ್ಟಡಗಳನ್ನಷ್ಟೇ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ. ಶೌಚಾಲಯಗಳಿದ್ದರೂ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ಯಶವಂತ್‌.
‘ಶೌಚಾಲಯಗಳ ದುರಸ್ತಿಗೆ ಕ್ರಮ’
‘15ನೇ ಹಣಕಾಸು ನಿಧಿ ಬಳಸಿಕೊಂಡು ಸಮುದಾಯ ಶೌಚಾಲಯಗಳ ದುರಸ್ತಿ ನಡೆಯುತ್ತಿದೆ. ಶೌಚಾಲಯಗಳಿಗೆ ಶೀಘ್ರ ವಿದ್ಯುತ್ ಯುಜಿಡಿ ಹಾಗೂ ನೀರಿನ ಸಂಪರ್ಕ ನೀಡಲಾಗುವುದು. ಸಂಘ ಸಂಸ್ಥೆಗಳು ಕಾರ್ಪೊರೇಟ್‌ ಸಂಸ್ಥೆಗಳು ಶೌಚಾಲಯಗಳ ನಿರ್ವಹಣೆಗೆ ಮುಂದೆ ಬಂದರೆ ವಹಿಸಲಾಗುವುದು. ಇಲ್ಲವಾದರೆ ನಗರಸಭೆಯಿಂದಲೇ ನಿರ್ವಹಣೆ ಮಾಡಲಾಗುವುದು. ಸಾರ್ವಜನಿಕರು ಬಯಲು ಶೌಚ ಮುಕ್ತ ನಗರವಾಗಿಸಲು ನಗರಸಭೆಯ ಜೊತೆಗೆ ಕೈಜೋಡಿಸಬೇಕು’ ಎಂದು ಪೌರಾಯುಕ್ತ ರಾಮದಾಸ್‌ ಮನವಿ ಮಾಡಿದರು.
ಅಂಕಿ–ಅಂಶ 25 ಚಾಮರಾಜನಗರದಲ್ಲಿರುವ ಸಾರ್ವಜನಿಕ ಶೌಚಾಲಯ 19 ಸ್ವಚ್ಛ ಭಾರತ ಮಿಷನ್‌ನಡಿ ನಿರ್ಮಿಸಿರುವ ಸಮುದಾಯ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT