ಯಳಂದೂರು: ಶಿಷ್ಯನೊಬ್ಬ ಗುರುಗಳ ಬಳಿ ಬಂದು ಮಂತ್ರ ಸಿದ್ದಾಂತವನ್ನು ಬೋಧಿಸುವಂತೆ ಬೇಡುತ್ತಾನೆ. ಆದರೆ, ಇದನ್ನು ಯಾರಿಗೂ ಉಪದೇಶಿಸದಂತೆ ಗುರುಗಳು ಕಟ್ಟಪ್ಪಣೆಮಾಡುತ್ತಾರೆ. ಮಂತ್ರ ಬೋಧನೆಯಾಗುತ್ತಲೇ ಸಮೀಪದ ದೇವಾಲಯದ ವಿಮಾನ ಗೋಪುರ ಏರಿ ಜನಸಾಮಾನ್ಯರಿಗೆ ಕೇಳುವಂತೆ ‘ಓಂ ನಮೋ ನಾರಾಯಣ’ ಎಂಬ ಅಷ್ಟಾಕ್ಷರಿ ಮಂತ್ರದ ಗುಟ್ಟನ್ನು ಪಠಿಸುತ್ತಾರೆ. ಆ ಮೂಲಕಧರ್ಮಕ್ಕೂ ಮಿಗಿಲಾದ ಶಕ್ತಿ ಸೇವೆಯಲ್ಲಿ ಇದೆ ಎಂಬುದನ್ನು ಜಗತ್ತಿಗೆ ಸಾರುತ್ತಾನೆ.

ಇವರೇ ರಾಮಾನುಜರು.

ಇವರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಆಲಯಕ್ಕೆ ಸಾವಿರ ವರ್ಷಗಳ ಹಿಂದೆ ಭೇಟಿ ನೀಡಿಬಿಳಿಗಿರಿ ದರ್ಶನ ಮಾಡಿದ್ದರು. ಇದೇ ಚಿಂತಕರು ಮುಂದೆ ಆಚಾರ್ಯ ಪಟ್ಟ ಅಲಂಕರಿಸಿದರು. ನಂತರನಾಡಿನ ಉದ್ದಗಲದಲ್ಲೂ ಜನರಿಗೆ ವಿಶಿಷ್ಟಾದ್ವೈತ ವೇದಾಂತ ಸಾರವನ್ನು ಮನದಟ್ಟು ಮಾಡಿಕೊಟ್ಟರು.

‘ಏಪ್ರಿಲ್ ತಿಂಗಳು ಹಲವು ಮಹಾನ್ ಪುರುಷರ ಹುಟ್ಟಿಗೆ ಕಾರಣವಾಗಿದೆ. ಶಂಕರ,ಬಸವಣ್ಣನವರ ಹಾದಿಯಲ್ಲಿ ವಿಶಿಷ್ಟವಾಗಿ ನಿಲ್ಲುವ ರಾಮಾನುಜರದ್ದು ವಿಶಿಷ್ಟವ್ಯಕ್ತಿತ್ವ. ನಾಡಿನ ಕಲಾ ಪರಂಪರೆ ಮತ್ತು ಮೇಲುಕೋಟೆಗಳ ನಂಟಿನೊಂದಿಗೆ ಎಲ್ಲರಉದ್ಧಾರದ ಕನಸು ಕಂಡವರು. ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೂ ಕೊಡುಗೆನೀಡಿದ್ದಾರೆ’ ಎಂದು ನಿವೃತ ಇತಿಹಾಸ ಅಧ್ಯಾಪಕ ರಮೇಶ್ ಹೇಳುತ್ತಾರೆ.

ಬೆಟ್ಟಕ್ಕೆ ಆಗಮನ:ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ 1017ರಲ್ಲಿ ಜನಿಸಿದ ಇವರು ಭಾರತದ ಪ್ರಮುಖ
ಆಧ್ಯಾತ್ಮಿಕ ಚಿಂತಕ. ಸಾಮಾಜಿಕ ಸಮಾನತೆಯ ತತ್ವಕ್ಕೆ ಒತ್ತುಕೊಟ್ಟರು. ಶ್ರೀರಂಗದ ಪೀಠಾಧಿಪತಿ ಆಗಿದ್ದರು. ವೇದಾಂತಕ್ಕೆವಿಶಿಷ್ಟಾದ್ವೈತ ಎಂಬ ಹೊಸ ತಾತ್ವಿಕತೆ ಪರಿಚಯಿಸಿದರು. ನಂತರ ಕುಲೋತ್ತುಂಗ ಚೋಳನಕೋಪಕ್ಕೆ ಗುರಿಯಾಗಿ ಕರ್ನಾಟಕಕ್ಕೆ ಓಡಿ ಬಂದರು. ಇಲ್ಲಿ ಇವರ ಚಿಂತನೆಗಳಿಗೆ ಉತ್ತಮಸ್ಪಂದನೆಯೂ ಸಿಕ್ಕಿತು. ಈ ಸಂದರ್ಭದಲ್ಲಿ ಬಿಳಿಗಿರಿಗೆ ಆಗಮಿಸಿ ದಾಸ ಪರಂಪರೆ ರೂಪಿಸಲು ಕಾರಣರಾದರು ಎನ್ನುತ್ತದೆ ಇಲ್ಲಿನ ಇತಿಹಾಸ.

ಆದಿಶೇಷನ ಅವತಾರ ಎಂದು ನಂಬಲಾದ ಶ್ರೀರಾಮಾನುಜರ ಜಯಂತಿಯನ್ನು ಚೈತ್ರ ಮಾಸದ ಆರ್ದ್ರನಕ್ಷತ್ರದಲ್ಲಿ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ಅಸ್ಪೃಶ್ಯರು ಎಂದುದೂರಿದವರಿಗೆ ಹರಿ (ವಿಷ್ಣು) ಜನ ಸ್ಥಾನಮಾನ ಮತ್ತು ಮಂತ್ರೋಪದೇಶ ಮಾಡದಂತೆ ತಡೆದಾಗ,ಇವರಿಗೆ ಮೋಕ್ಷ ಸಿಗುತ್ತದೆ ಎಂದರೆ ನಾನು ನರಕಕ್ಕೂ ಹೋಗಲೂ ಸಿದ್ಧ ಎಂದವರು ರಾಮಾನುಜಾಚಾರ್ಯರು.

ಮನುಕುಲದ ಉದ್ಧಾರಕ್ಕೆ ಶ್ರಮಿಸಿದರು...

‘ಕನ್ನಡ ಸಂಸ್ಥಾನದ ರಾಜಭಟ್ಟನನ್ನು ವಿಷ್ಣುವರ್ಧನನ್ನಾಗಿಸಿ ಬೇಲೂರು ಶಿಲ್ಪಕಲೆಬೇರೂರಲು ರಾಮಾನುಜರು ಕಾರಣರಾದರು. ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಮಡಿ,ಮೈಲಿಗೆ ಆಚರಣೆ ವಿರೋಧಿಸಿದರು. ಹಿಂದೂ–ಮುಸ್ಲಿಂ ಐಕ್ಯತೆಗೆ ಒತ್ತು ನೀಡಿರುವುದುಚರಿತ್ರೆಯಲ್ಲಿ ದಾಖಲಾಗಿದೆ. ಕೊರೊನಾ ವೈರಸ್ ಜಗವನ್ನು ಆಲಂಗಿಸುತ್ತಿರುವಾಗರಾಮಾನುಜರ ಜಯಂತಿ ಜಾತಿ, ಮತ ಮೀರಿದ ಮನುಕುಲದಉದ್ಧಾರವನ್ನು ಸಾರುತ್ತದೆ’ ಎಂದುರಂಗನಾಥನ ದೇವಳದ ಅರ್ಚಕ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.